jitendra kundeshwar interview with mungaru male director yogaraja bhat
2007-07-20
2007-07-19
ಗಣೇಶ್‌ಗೆ ಅಭಿಮಾನಿಗಳ ಹುಡು"ಕಾಟ’ ಏರ್‌ಪೋರ್ಟ್‌ವರೆಗೆ ಹೋಗಿ ಬಂದ ಗಣೇಶ್
ಮಂಗಳೂರು, ಜು.೬- ಉಡುಪಿ ಪುರಭವನದ ಗುರುವಾರ ಸಮಾರಂಭಕ್ಕೆ ಮುಂಗಾರು ಮಳೆ ಗಣೇಶ್ ಎರಡು ಬಾರಿ ಆಗಮಿಸಿ ಅಚ್ಚರಿ ಮೂಡಿಸಿದರು.
ಸಂಘಟಕರು ಗಣೇಶ್‌ಗೆ ೩ ಗಂಟೆಗೆ ಸಮಾರಂಭ ನಡೆಯಲಿದೆ ಎಂದು ಹೇಳಿದ್ದರು. ಆದರೆ, ೩.೪೫ರ ವೇಳೆಗೆ ಆಗಮಿಸಿದ ಗಣೇಶ್‌ಗೆ ನಿರಾಸೆ ಕಾದಿತ್ತು. ಟೌನ್ ಹಾಲ್ ಹೊರಗಡೆ ಜನಜಂಗುಳಿ ಏನೋ ಇತ್ತು. ಆದರೆ ಕಾರ್‍ಯಕ್ರಮ ಸಂಜೆ ೫ ಗಂಟೆಗೆ ಎಂಬ ಉತ್ತರ ಬಂತು. ಅಭಿಮಾನಿಗಳಿಗೆ ಅಲ್ಲೇ ಆಟೋಗ್ರಾಫ್, ಕೊಟ್ಟು ಫೋಟೊ ತೆಗೆಸಿ ಖುಷಿ ಪಡಿಸಿದರು.
ಈ ನಡುವೆ ೫ ಗಂಟೆಗೆ ಬಜಪೆ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಅಭಿಮಾನಿಗಳ ಕಣ್ತಪ್ಪಿಸಿ ಅಲ್ಲಿಂದ ಅವರು ಏರ್ }ರ್ಟ್‌ಗೆ ಹೊರಟರು. ಈ ವೇಳೆಗೆ "ಚೆಲ್ಲಾಟ’ ಗಣೇಶ್‌ಗಾಗಿ ಅಭಿಮಾನಿಗಳ ಹುಡು"ಕಾಟ’ ಆರಂಭವಾಗಿತ್ತು. ಯುವ ಹೃದಯದಲ್ಲಿ "ಚೆಲುವಿನ ಚಿತ್ತಾರ’ ಮೂಡಿಸಿದ್ದ ಯುವ ನಾಯಕನಿಗಾಗಿ ಉಡುಪಿಯಲ್ಲಿ ಅಭಿಮಾನಿಗಳ ಪ್ರವಾಹವೇ ಹರಿದಿತ್ತು. ಕೊನೆಗೆ ಸಂಘಟಕರು ಒತ್ತಾಯಕ್ಕೆ (ಬೆದರಿಕೆ !) ಮಣಿದು ಬಜಪೆ ನಿಲ್ದಾಣದವರೆಗೆ ಹೋಗಿದ್ದ ಗಣೇಶ್, ಚಿತ್ರ ನಿರ್ಮಾಪಕ ಗಂಗಾಧರ್ ಜತೆ ಸಂಜೆ ೬.೩೦ಕ್ಕೆ ವಾಪಸ್ ಉಡುಪಿಗೆ ಮರಳಿದರು.
ಅಭಿಮಾನಿಗಳ ದಾಂಧಲೆ: ಗಣೇಶ್‌ಗೆ ಎಲ್ಲೆಡೆ, ಎಲ್ಲ ರೀತಿಯ ಅಭಿಮಾನಿಗಳಿದ್ದರು. ೩ ವರ್ಷದ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಗಣೇಶ್ ಮೋಡಿ ಎದ್ದು ಕಾಣುತ್ತಿತ್ತು. ಗಣೇಶ್ ಪುಟ್ಟ ಕಿರು ನಗೆಗಾಗಿ ಜನ ಹಂಬಲಿಸುತ್ತಿದ್ದರು. ಕನ್ನಡದ ಒಬ್ಬ ನಟ ಈ ರೀತಿಯ ಅಭಿಮಾನ ಅಕ್ಕರೆ ಪಡೆದದ್ದು ಬಹಳ ಅಪರೂಪವೇನೊ.
ಕಾರ್ಕಳದ ಅಭಿಮಾನಿ ಶಿಲ್ಪಾ ಎಂಬಾಕೆ ಗಣೇಶ್ ಹಸ್ತಾಕ್ಷರಕ್ಕೆ, ಆರಾಧ್ಯ ದೈವವನ್ನು ಮುಟ್ಟಿ ನೋಡಲು ಕುಂದಾಪುರಕ್ಕೆ ಆಗಮಿಸಿದ್ದಳು. ಅಲ್ಲಿಂದ ಹಟ್ಟಿಯಂಗಡಿ ದೇವಸ್ಥಾನದವರೆಗೆ ಬಂದು ಫೋಟೊ ತೆಗೆಸಿ ಕೈಕುಲುಕಿದಾಗಲೇ ಆಕೆಗೆ ತೃಪ್ತಿಯಾಗಿದ್ದು.
ಕುಂದಾಪುರದ ವೆಂಕಟರಮಣ ಆರ್ಕೆಡ್‌ನಲ್ಲಿ ೨ ಗಂಟೆಗೆ ಕಾರ್‍ಯಕ್ರಮ ನಿಗದಿಯಾಗಿದ್ದರೂ ಇದಕ್ಕೆ ಮುನ್ನ ೧.೩೦ಕ್ಕೆಆರಂಭವಾಗಿತ್ತು. ಆಗ ಸಭಾಭವನ ತುಂಬಿರಲಿಲ್ಲ. ಗಣೇಶ್ ಬಂದ ಸುದ್ದಿ ಹಬ್ಬುತ್ತಿದ್ದಂತೆ ತಕ್ಷಣ ಸಭಾಭವನ ತುಂಬಿ ಹೋಯಿತು.
ಕಾರ್‍ಯಕ್ರಮ ಮುಗಿದು ಹೊರ ಬರುತ್ತಿದ್ದಂತೆ, ಕುರ್ಚಿಗಳನ್ನು ಚೆಲ್ಲಾಪಿಲ್ಲಿಯಾಗಿಸಿದ ಅಭಿಮಾನಿಗಳು ಗಣೇಶ್ ಮೈ ಮುಟ್ಟಲು ಏರಿ ಹೋದರು. ಸುತ್ತಲೂ ಇದ್ದ {ಲೀಸರು ಅಸಹಾಯಕರಾಗಿದ್ದರು.
ಉಡುಪಿಯಲ್ಲಿ ಯುವತಿಯೊಬ್ಬಳು ಗಣೇಶ್‌ಗೆ ಕಿಸ್ ನೀಡಿ ಜೀವನದಲ್ಲಿ ಸಾರ್ಥಕತೆ ಪಡೆದಳು. "ಅಮ್ಮಾ ನಾನು ಗಣೇಶ್‌ಗೆ ಕಿಸ್ ಕೊಟ್ಟೆ’ ಎಂದು ತಾಯಿಯಲ್ಲಿಹೇಳುತ್ತಿದ್ದರೆ ಆಕೆಯೂ ಸಂತೋಷದಲ್ಲಿ ಭಾಗಿಯಾದರು.
ಗಣೇಶ್ ತನ್ನ ಇನ್ನೋವಾ ವಾಹದಲ್ಲಿ ತೆರಳಿ ಗುರುವಾರ ಇಡೀದಿನ ದೇವರ ಮತ್ತು ಅಭಿಮಾನಿ ದೇವರ ದರ್ಶನ ಪಡೆದರು. ಅವರ ೨ ಮೊಬೈಲ್ ಫೋನ್ ಸದಾ ರಿಂಗುಣಿಸುತ್ತಿತ್ತು. ಮಗಾ ಎಲ್ಲಿದ್ದಿ, ಹೇಗಿದ್ದಿ ಎಂದು ತಾಯಿ ಆಗಾಗ ಕೇಳುತ್ತಿದ್ದರು. ಅವರ ಮಧ್ಯೆ ಮಮತೆಯ ಸಣ್ಣ ಜಗಳವೂ ನಡೆಯುತ್ತಿತ್ತು.
ಯಾರೋ ಮಕ್ಕಳು, ಯುವತಿಯರು ಹೇಗೋ ನಂಬರ್ ಸಂಪಾದಿಸಿ ಮಾತನಾಡುತ್ತಿದ್ದರು. ಮುಂಗಾರುಮಳೆ ಡೈಲಾಗ್‌ಗಳನ್ನು ಹೇಳುತ್ತಿದ್ದರು. ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ಹುಚ್ಚನಾಗುವ ದೃಶ್ಯ ಸಹಿಸದೆ ಈ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದರು.
ಒಟ್ಟಾರೆ ದಿನವಿಡೀ "ಮುಂಗಾರು ಮಳೆ’ ಗಣೇಶನ ಸುತ್ತ ಧೋ ಎಂದು ಸುರಿಯುತ್ತಿತ್ತು. ಕರಾವಳಿಯ ಟಾಕೀಸ್‌ಗಳಲ್ಲೂ ಮುಂಗಾರು ಮಳೆ ಜೋರಾಗಿ ಹರಿಯುತ್ತಿತ್ತು. ಗಣೇಶ ಬಂದದಕ್ಕೆ ಏನೊ ನಿಜವಾದ ಮುಂಗಾರು ಮಳೆ ಕೊಂಚ ಕಡಿಮೆಯಾಗಿತ್ತು.