2008-07-31
ಹೋಂ ಮಿನಿಸ್ಫ್ತ್ರೆ ಹೀಗೆ ಆಡಿದರೆ ಹೇಗೆ ?
ಗೃಹ ಸಚಿವ ವಿ ಎಸ್ ಆಚಾರ್ಯರು ಮಾಧ್ಯಮಗಳ ವಿರುದ್ಧ ಕೊನೆಗೆ ತಮ್ಮನ್ನು ಸೋಲಿಸಿದ ಜನರ ವಿರುದ್ಧ ಕೂಡ ಕೇವಲವಾಗಿ ಮಾತನಾಡಿದ್ದಾರೆ. ತೀಕಿಸುವ್ ಭರದಲ್ಲಿ ತಾನೊಬ್ಬ ಘನತೆವೆತ್ತ ಕರ್ನಾಟಕ ಸರಕಾರದ ಗೃಹ ಸಚಿವ ಎಂಬುದನ್ನೂ ಮರೆತಿದ್ದಾರೆ. ಇವರ ಇಂಥಹ ಕೀಳು ಮಟ್ಟದ ತಂತ್ರದಿಂದಲೇ ಉಡುಪಿ ಪತ್ರಕರ್ತರು ಇವರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತಿದ್ದದ್ದು. ನಾನು ಬರೆದ ಲೇಖನದಲ್ಲಿ ಯಾವುದೇ ತಪ್ಪು ಇಲ್ಲದಿದ್ದರೂ ನನ್ನನ್ನು ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಬೇರೆ ಯವರ ಹೆಸರಲ್ಲಿ ಕಾಮೆಂಟ್ ಮಾಡಿ ತೇಜೋವಧೆ ಮಾಡುವ, ಶಿಖಂಡಿ ಪತ್ರಕರ್ತ ಮತ್ತು ಮಗನನ್ನು ಬಳಸಿಕೊಂಡು ಬ್ಲಾಗ್ ಮಾದಿವಿಚಾರ ನನಗೆ ಗೊತ್ತಿದೆ. ಪತ್ರ ಕರ್ತ್ಹರನ್ನು ಮಣಿಸಲು ಈ ಹಿಂದೆ ಅನಾಮಧೇಯ ಬ್ಲಾಗ್ನಲ್ಲಿ ಇದೆ ರೀತಿಯ ಟೀಕೆ ಮಾಡುತಿದ್ದರು
ಆದರೆ ಇಂಥಹ ಥರ್ಡ್ ಕ್ಲಾಸ್ ಟ್ರೀಟ್ ಮೆಂಟ್ ಗೆ ಮಣಿದು ಸತ್ಯ ವಿಚಾರಗಳನ್ನು ಪ್ರಕಟಿಸಲು ಹಿಂಜರಿಯುವ್ ಜಾತಿ ನಾನಲ್ಲ ಎಂಬುದನ್ನೂ ವಿರೋಧಿಗಳು ತಿಳಿದುಕೊಳ್ಳಲಿ. ಅದು ಅಲ್ಲದೆ ನಾನು ಸದಾಶ ಯಾ ದಿಂದಲೇ ವಿ ಎಸ್ಸ್ ಆಚಾರ್ಯರು ವಿಪಕ್ಷ ನಾಯಕರನ್ನ್ನುಟೀಕಿಸಿದ ಸುದ್ದಿ ಮಾತ್ರ ಕಳುಹಿಸಿದ್ದೆ. ಮುಖ್ಯ ಉಪ ಸಂಪಾದಕರು ಫೋಟೋ ನೋಡಿ ನೋಡಿ ಇದರಲ್ಲಿ ಸಿ ಎಂ ಯಡಿಯೂರಪ್ಪ ಇದ್ದದ್ದು ನೋಡಿ ಸ್ಟೋರಿ ಚೇಂಜ್ ಮಾಡಿಸಿದರು ! ಆದರೆ ಇ ಸುದ್ದಿಗೂ ನಾನೇ ಬದ್ಧನಾಗಿದ್ದೇನೆ
ಆಚಾರ್ಯ ಮುಖ್ಯ ಮಂತ್ರಿ ಮತ್ತು ಅನಂತಕುಮಾರ್ ಗೆ ನಿಂದಿಸಿದ ಸುದ್ದಿ ಗಾಗಿ http://drvsacharya.blogspot.com/2008/07/secondary-bomb-blasts-at-hospitals-in.html
ಒರಿಜಿನಲ್ ಪೋಸ್ಟ್ ಹೀಗೆ ಇತ್ತು
ಬ್ಲಾಗ್ ಬಾಣ
ಗೃಹ ಸಚಿವರಿಂದ ಕಾಂಗ್ರೆಸ್ ನಾಯಕರ ಲೇವಡಿ
ಜಿತೇಂದ್ರ ಕುಂದೇಶ್ವರ ವಿಕ ಸುದ್ದಿಲೋಕ
ಬಾಂಬ್ ಸ್ಪೋಟ ನಡೆದ ಸ್ಥಳಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಕೇಂದ್ರ ಸಚಿವ ಒಸ್ಕಾರ್ ಫ್ಹೆರ್ನಂದಿಸ್ ಕ್ರಮದ ಬಗ್ಗೆ ಗೃಹ ಸಚಿವ ವಿ ಎಸ್ ಆಚಾರ್ಯ ತಮ್ಮ ಬ್ಲಾಗ್ ಮಂಡಲದಲ್ಲಿ ಕುಹಕ ಆಡಿದ್ದಾರೆ. ಸ್ಪೋಟ ನಡೆದ ಸ್ಥಳಕ್ಕೆ ಏಕೆ ಭೇಟಿ ನೀಡಬಾರದು ಎಂಬುದಕ್ಕೆ ಉದಾಹರಣೆ ಸಹಿತ ವಿವರ ನೀಡಿದ್ದಾರೆ. ಇ ಬಗ್ಗೆ ಮಾಧ್ಯಮಗಳ ಆಕ್ಷೇಪವನ್ನು ಲೇವಡಿ ಮಾಡಿ ದೂರಿನ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಗೃಹ ಸಚಿವರಾದ ಬಳಿಕ ಆಚಾರ್ಯರ ಬ್ಲಾಗ್ ಸಂಪೂರ್ಣ ಚೇತರಿಕೆ ಪಡೆದುಕೊಂಡಿದ್ದು, ಪ್ರತಿಪಕ್ಷ ನಾಯಕರ ವರ್ತನೆ ಖಂಡಿಸಲು ಆರೋಪಗಳಿಗೆ ಸ್ಪಷ್ಟನೆ ನೀಡಲು, ಪತ್ರಿಕೆಗಳ ಲೇಖನಗಳ ಪೋಸ್ಟ್ ಮಾರ್ಟಂ ಮಾಡಲು ಬಳಸಿಕೊಂಡಿದ್ದಾರೆ.
ಅನಗತ್ಯವಾಗಿ ಸ್ಪೋಟ ನಡೆದ ಸ್ಥಳಗಳಿಗೆ ಭೇಟಿ ನೀಡ ಬೇಡಿ ಎಂದು ಮನವಿ ಮದಿರುವ್ ಸಚಿವರು ಅದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. ಮೊನ್ನೆ ನಡೆದ ಸ್ಪೋಟಗಳು ಭಯೋತ್ಪಾದಕರೇ ನಡೆಸಿರಬೇಕು ಎಂದೇನು ಯಿಲ್ಲ ನಿಮ್ಮ ನೆರೆಹೊರೆಯ ಸಮಾಜ ಘ್ಥಕ ಶಕ್ತಿಗಳು ನಡೆಸಿರಬಹುದು, ಅವ್ರು ನಿಮ್ಮನ್ನು ಸೂಕ್ಷ್ಮ ವಾಗಿ ಗಮನಿಸುತ್ತಿರ್ಬಹುದು ಜನಪ್ರತಿನಿಧಿಗಳು ಅಲ್ಲಿ ಭೇಟಿ ನೆಇದರೆ ಸಮಾಜ ಘಾತಕ ಶಕ್ತಿಗಳು ಅಲ್ಲಿಯೂ ಸ್ಪೋಟ ನಡೆಸಬಹುದು. ಅಹಮದಾಬಾದು ಆಸ್ಪತ್ರೆ ವಠಾರದಲ್ಲಿ ನಡೆದ ಪಶ್ಚಾತ್ ಸ್ಪೋಟ ಗಳೇ ಇದಕ್ಕೆ ಉದಾಹರಣೆ .........