2007-12-31
2007-07-19
ಗಣೇಶ್‌ಗೆ ಅಭಿಮಾನಿಗಳ ಹುಡು"ಕಾಟ’ ಏರ್‌ಪೋರ್ಟ್‌ವರೆಗೆ ಹೋಗಿ ಬಂದ ಗಣೇಶ್
ಮಂಗಳೂರು, ಜು.೬- ಉಡುಪಿ ಪುರಭವನದ ಗುರುವಾರ ಸಮಾರಂಭಕ್ಕೆ ಮುಂಗಾರು ಮಳೆ ಗಣೇಶ್ ಎರಡು ಬಾರಿ ಆಗಮಿಸಿ ಅಚ್ಚರಿ ಮೂಡಿಸಿದರು.
ಸಂಘಟಕರು ಗಣೇಶ್‌ಗೆ ೩ ಗಂಟೆಗೆ ಸಮಾರಂಭ ನಡೆಯಲಿದೆ ಎಂದು ಹೇಳಿದ್ದರು. ಆದರೆ, ೩.೪೫ರ ವೇಳೆಗೆ ಆಗಮಿಸಿದ ಗಣೇಶ್‌ಗೆ ನಿರಾಸೆ ಕಾದಿತ್ತು. ಟೌನ್ ಹಾಲ್ ಹೊರಗಡೆ ಜನಜಂಗುಳಿ ಏನೋ ಇತ್ತು. ಆದರೆ ಕಾರ್‍ಯಕ್ರಮ ಸಂಜೆ ೫ ಗಂಟೆಗೆ ಎಂಬ ಉತ್ತರ ಬಂತು. ಅಭಿಮಾನಿಗಳಿಗೆ ಅಲ್ಲೇ ಆಟೋಗ್ರಾಫ್, ಕೊಟ್ಟು ಫೋಟೊ ತೆಗೆಸಿ ಖುಷಿ ಪಡಿಸಿದರು.
ಈ ನಡುವೆ ೫ ಗಂಟೆಗೆ ಬಜಪೆ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಅಭಿಮಾನಿಗಳ ಕಣ್ತಪ್ಪಿಸಿ ಅಲ್ಲಿಂದ ಅವರು ಏರ್ }ರ್ಟ್‌ಗೆ ಹೊರಟರು. ಈ ವೇಳೆಗೆ "ಚೆಲ್ಲಾಟ’ ಗಣೇಶ್‌ಗಾಗಿ ಅಭಿಮಾನಿಗಳ ಹುಡು"ಕಾಟ’ ಆರಂಭವಾಗಿತ್ತು. ಯುವ ಹೃದಯದಲ್ಲಿ "ಚೆಲುವಿನ ಚಿತ್ತಾರ’ ಮೂಡಿಸಿದ್ದ ಯುವ ನಾಯಕನಿಗಾಗಿ ಉಡುಪಿಯಲ್ಲಿ ಅಭಿಮಾನಿಗಳ ಪ್ರವಾಹವೇ ಹರಿದಿತ್ತು. ಕೊನೆಗೆ ಸಂಘಟಕರು ಒತ್ತಾಯಕ್ಕೆ (ಬೆದರಿಕೆ !) ಮಣಿದು ಬಜಪೆ ನಿಲ್ದಾಣದವರೆಗೆ ಹೋಗಿದ್ದ ಗಣೇಶ್, ಚಿತ್ರ ನಿರ್ಮಾಪಕ ಗಂಗಾಧರ್ ಜತೆ ಸಂಜೆ ೬.೩೦ಕ್ಕೆ ವಾಪಸ್ ಉಡುಪಿಗೆ ಮರಳಿದರು.
ಅಭಿಮಾನಿಗಳ ದಾಂಧಲೆ: ಗಣೇಶ್‌ಗೆ ಎಲ್ಲೆಡೆ, ಎಲ್ಲ ರೀತಿಯ ಅಭಿಮಾನಿಗಳಿದ್ದರು. ೩ ವರ್ಷದ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಗಣೇಶ್ ಮೋಡಿ ಎದ್ದು ಕಾಣುತ್ತಿತ್ತು. ಗಣೇಶ್ ಪುಟ್ಟ ಕಿರು ನಗೆಗಾಗಿ ಜನ ಹಂಬಲಿಸುತ್ತಿದ್ದರು. ಕನ್ನಡದ ಒಬ್ಬ ನಟ ಈ ರೀತಿಯ ಅಭಿಮಾನ ಅಕ್ಕರೆ ಪಡೆದದ್ದು ಬಹಳ ಅಪರೂಪವೇನೊ.
ಕಾರ್ಕಳದ ಅಭಿಮಾನಿ ಶಿಲ್ಪಾ ಎಂಬಾಕೆ ಗಣೇಶ್ ಹಸ್ತಾಕ್ಷರಕ್ಕೆ, ಆರಾಧ್ಯ ದೈವವನ್ನು ಮುಟ್ಟಿ ನೋಡಲು ಕುಂದಾಪುರಕ್ಕೆ ಆಗಮಿಸಿದ್ದಳು. ಅಲ್ಲಿಂದ ಹಟ್ಟಿಯಂಗಡಿ ದೇವಸ್ಥಾನದವರೆಗೆ ಬಂದು ಫೋಟೊ ತೆಗೆಸಿ ಕೈಕುಲುಕಿದಾಗಲೇ ಆಕೆಗೆ ತೃಪ್ತಿಯಾಗಿದ್ದು.
ಕುಂದಾಪುರದ ವೆಂಕಟರಮಣ ಆರ್ಕೆಡ್‌ನಲ್ಲಿ ೨ ಗಂಟೆಗೆ ಕಾರ್‍ಯಕ್ರಮ ನಿಗದಿಯಾಗಿದ್ದರೂ ಇದಕ್ಕೆ ಮುನ್ನ ೧.೩೦ಕ್ಕೆಆರಂಭವಾಗಿತ್ತು. ಆಗ ಸಭಾಭವನ ತುಂಬಿರಲಿಲ್ಲ. ಗಣೇಶ್ ಬಂದ ಸುದ್ದಿ ಹಬ್ಬುತ್ತಿದ್ದಂತೆ ತಕ್ಷಣ ಸಭಾಭವನ ತುಂಬಿ ಹೋಯಿತು.
ಕಾರ್‍ಯಕ್ರಮ ಮುಗಿದು ಹೊರ ಬರುತ್ತಿದ್ದಂತೆ, ಕುರ್ಚಿಗಳನ್ನು ಚೆಲ್ಲಾಪಿಲ್ಲಿಯಾಗಿಸಿದ ಅಭಿಮಾನಿಗಳು ಗಣೇಶ್ ಮೈ ಮುಟ್ಟಲು ಏರಿ ಹೋದರು. ಸುತ್ತಲೂ ಇದ್ದ {ಲೀಸರು ಅಸಹಾಯಕರಾಗಿದ್ದರು.
ಉಡುಪಿಯಲ್ಲಿ ಯುವತಿಯೊಬ್ಬಳು ಗಣೇಶ್‌ಗೆ ಕಿಸ್ ನೀಡಿ ಜೀವನದಲ್ಲಿ ಸಾರ್ಥಕತೆ ಪಡೆದಳು. "ಅಮ್ಮಾ ನಾನು ಗಣೇಶ್‌ಗೆ ಕಿಸ್ ಕೊಟ್ಟೆ’ ಎಂದು ತಾಯಿಯಲ್ಲಿಹೇಳುತ್ತಿದ್ದರೆ ಆಕೆಯೂ ಸಂತೋಷದಲ್ಲಿ ಭಾಗಿಯಾದರು.
ಗಣೇಶ್ ತನ್ನ ಇನ್ನೋವಾ ವಾಹದಲ್ಲಿ ತೆರಳಿ ಗುರುವಾರ ಇಡೀದಿನ ದೇವರ ಮತ್ತು ಅಭಿಮಾನಿ ದೇವರ ದರ್ಶನ ಪಡೆದರು. ಅವರ ೨ ಮೊಬೈಲ್ ಫೋನ್ ಸದಾ ರಿಂಗುಣಿಸುತ್ತಿತ್ತು. ಮಗಾ ಎಲ್ಲಿದ್ದಿ, ಹೇಗಿದ್ದಿ ಎಂದು ತಾಯಿ ಆಗಾಗ ಕೇಳುತ್ತಿದ್ದರು. ಅವರ ಮಧ್ಯೆ ಮಮತೆಯ ಸಣ್ಣ ಜಗಳವೂ ನಡೆಯುತ್ತಿತ್ತು.
ಯಾರೋ ಮಕ್ಕಳು, ಯುವತಿಯರು ಹೇಗೋ ನಂಬರ್ ಸಂಪಾದಿಸಿ ಮಾತನಾಡುತ್ತಿದ್ದರು. ಮುಂಗಾರುಮಳೆ ಡೈಲಾಗ್‌ಗಳನ್ನು ಹೇಳುತ್ತಿದ್ದರು. ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ಹುಚ್ಚನಾಗುವ ದೃಶ್ಯ ಸಹಿಸದೆ ಈ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದರು.
ಒಟ್ಟಾರೆ ದಿನವಿಡೀ "ಮುಂಗಾರು ಮಳೆ’ ಗಣೇಶನ ಸುತ್ತ ಧೋ ಎಂದು ಸುರಿಯುತ್ತಿತ್ತು. ಕರಾವಳಿಯ ಟಾಕೀಸ್‌ಗಳಲ್ಲೂ ಮುಂಗಾರು ಮಳೆ ಜೋರಾಗಿ ಹರಿಯುತ್ತಿತ್ತು. ಗಣೇಶ ಬಂದದಕ್ಕೆ ಏನೊ ನಿಜವಾದ ಮುಂಗಾರು ಮಳೆ ಕೊಂಚ ಕಡಿಮೆಯಾಗಿತ್ತು.
2007-07-07
2007-06-16
2007-06-13
- ಹಣ ಕಂಡರೆ, ಹೆಣ ಬಾಯಿಬಿಡುತ್ತದೆ।
ಪಿಚ್‌ನಲ್ಲಿ ಮಣ್ಣು ಇರುವದಲ್ಲಿ ನೋಟಿನ ಕಂತೆಗಳೇ ಇದೆ। ಆದರೆ ಇದು ಭಾರತೀಯ ಕ್ರಿಕೆಟ್‌ಗೆ ಹಿಡಿ ಮಣ್ಣು ಆಗದಿರಲಿ. ಕ್ರಿಕೆಟಿಗರು ದೇಶಕ್ಕೆ ಆಡುತ್ತಿಲ್ಲ. ತಮ್ಮ ಸ್ಥಾನ ಭದ್ರತೆಗೆ ಮತ್ತು ಹಣ ಥೈಲಿಗಾಗಿ. ಕೋಟಿಗಟ್ಟಲೆ ಬರುವ ಹಣಕ್ಕಾಗಿ. ಎಂಡೋಸಿಂಗ್ ಜಾಹೀರಾತು ಅಂದರೆ ಎಷ್ಟು ಹೊತ್ತು ಮೈದಾನದಲ್ಲಿ ಆಟಗಾರ ಇರುತ್ತಾನೊ ಅವನಿಗೆ ಅಷ್ಟು ಹೊತ್ತು ಹೆಚ್ಚು ಹಣ ನೀಡುತ್ತವೆ. ಟಿವಿಗಳಲ್ಲಿ ತೋರಿಸುವ ಜಾಹೀರಾತಿನ ಸಮಯದಂತೆ. ಈ ಹಣ ಸೌರವ್ ಗಂಗೂಲಿ ಮಾತ್ರವಲ್ಲ ಎಲ್ಲ ಕ್ರಿಕೆಟಿಗರಿಗೂ ಸಿಗುತ್ತದೆ ಎಂಬುದನ್ನು ಆಯ್ಕೆಗಾರರೇ ಬಾಯಿ ಬಿಟ್ಟಿದ್ದಾರೆ. ಬಾಂಗ್ಲಾ ಎದುರು ಗಂಗೂಲಿ ಆಡಿದ ನಿಧಾನಗತಿ ಆಟಕ್ಕೆ ಇದೇ ಕಾರಣ ಎಂಬುದನ್ನೂ ಆಯ್ಕೆಗಾರರು ಒಪ್ಪುತ್ತಾರೆ. ಹಾಗಾದರೆ ಕ್ರಿಕೆಟ್ ಎಲ್ಲಕ್ಕಿಂತ ಮೇಲು ಎನ್ನುತ್ತಿದ್ದ ಇವರು ಇದೀಗ ಹಣವೇ ಎಲ್ಲಕ್ಕಿಂತ ಮೇಲು ಅನ್ನತೊಡಗಿದ್ದಾರೆ. ಲಡೇಂಗೆ ಜೀತೇಂಗೆ ಎನ್ನುತ್ತಿದ್ದ ಕ್ರಿಕೆಟಿಗರು ತಮ್ಮೊಳಗೆ ಹೊಡೆದಾಡಿಕೊಂಡು ಭಾರತದ ಅಸಂಖ್ಯ ಕೋಟಿ ಅಭಿಮಾನಿಗಳ ಹೃದಯವನ್ನು ಒಡೆದು ಬಿಟ್ಟರೇ ಛೆ. ಯುವರಾಜ್ ಸಿಂಗ್‌ಗೆ ರಾತ್ರಿ ಮಜಾ ಪಾರ್ಟಿಗಳಿಂದಲೇ ಉಪನಾಯಕ ಹುದ್ದೆ ನೀಡಿಲ್ಲ ಎನ್ನುತ್ತಾರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಆಯ್ಕೆಗಾರ ಭೂಪಿಂದರ್ ಸಿಂಗ್. ಕಿಮ್ ಶರ್ಮ ಜತೆ ಮಜಾ ಉಡಾಯಿಸುತ್ತಿದ್ದ ಯುವರಾಜ್ ಕ್ರಿಕೆಟ್‌ನಲ್ಲಿ ಹೊಡೆಬಡಿಯ ದಾಂಡಿಗನೋ ಹಾಗೆಯೇ ಜೀವನದಲ್ಲೂ ಕೂಡಾ. ಫೋಟೊ ಗ್ರಾಫರ್ ಜತೆ, ಮನೆಗೆ ಬಂದ ಅತಿಥಿಗಳ ಜತೆ ಜಗಳವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗಳೂ ಇವೆ. ಇದೇ ಪಾರ್ಟಿ ವಿಷಯದಲ್ಲಿ ಈತನಿಗೆ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿದೆ ಕೂಡ. ಜಹೀರ್ ಖಾನ್, ಪಠಾಣ್ ಅವರ ಪ್ರೇಮ ಪ್ರಕರಣಗಳು ತೀರಾ ಇತ್ತೀಚಿನ ಧೋನಿ- ಹಸೀನ್ ಚುಂಬನ ಪ್ರಕರಣಗಳಿಂದ ಕ್ರಿಕೆಟ್ ತಾರೆಯರಿಗೆ ಸಿಗುವ ಅಭಿಮಾನದ ಆಳ ಅರ್ಥವಾಗುತ್ತದೆ ಹೀಗಿರುವಾಗ ಅವರು ದಾರಿ ತಪ್ಪುವುದರಲ್ಲಿ ಸಂಶಯವಿಲ್ಲ. ಇವರು ಹೊರಗಡೆ ಏನೇ ಮಾಡಲಿ ತಂಡ ಗೆದ್ದರೆ ಏನೂ ಹೇಳುವುದಿಲ್ಲ. ಆಯೆ ಆಣುಮಗೆ ಮಲ್ತೆ’ ಎನ್ನುತ್ತಾರೆ ಆದರೆ ಆಡದೆ ಉಳಿದು ರಾಜಕೀಯ ಮಾಡಿದರೆ ಮಾತ್ರ ಯಾರೂ ಕ್ಷಮಿಸುವುದಿಲ್ಲ ಅಷ್ಟೆ. ಭಾರತ ಕ್ರಿಕೆಟ್ ಆಟಗಾರರನ್ನು ಆಯ್ಕೆಮಾಡುವ ಮಹನೀಯರು ಹೇಳಿದ್ದೇನು ಗೊತ್ತೆ. ಮೊದಲನೇಯದಾಗ ಭೂಪಿಂದರ್ ಸಿಂಗ್ ಸೀನಿಯರ್-ದ್ರಾವಿಡ್‌ಗೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಸಹಕಾರ ನೀಡುತ್ತಿರಲೇ ಇಲ್ಲ. ಗುಪುಗಾರಿಕೆ ಇತ್ತು. ಸೆಹವಾಗ್, ಸಚಿನ್, ಹರ್ಭಜನ್ ಜತೆ ದಿನಗಟ್ಟಲೆ ಮಾತನಾಡುತ್ತಿರಲಿಲ್ಲ. ಬಿಸಿಸಿಐ ಕಾರ್‍ಯದರ್ಶಿ ನಿರಂಜನ್ ಶಾ ಹೀಗೆ ಹೇಳ್ತಾರೆ. ಚಾಪೆಲ್‌ಗೆ ಅಹಂಕಾರ ಹೆಚ್ಚು ಎಲ್ಲರೂ ತಾನು ಹೇಳಿದ್ದು ಕೇಳಬೇಕು ಎಂಬ ಗರ್ವ ಮನೆ ಮಾಡಿತ್ತು. ಸ್ನೇಹಿತರಂತೆ ವರ್ತಿಸಬೇಕಿದ್ದ ಗುರು ಚಾಪೆಲ್ ಶಾಲೆ ಮೇಷ್ಟ್ರಂತೆ ಬೆತ್ತ ಹಿಡಿದು ಮಕ್ಕಳಿಗೆ ದಂಡಿಸಿ ಪಾಠ ಮಾಡುವಂತೆ ಕಾಣುತ್ತಿದ್ದರು. ಜಾಹೀರಾತು ಕಂಪನಿಗಳು ಪ್ರಭಾವ ಬೀರುತ್ತಿವೆ. ಹಾಗಾಗಿ ಬಿಸಿಸಿಐ ಜಾಹೀರಾತು ಕಂಪನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಆದ್ದರಿಂದಲೇ ಇಂಥ ಅವಸ್ಥೆ. ಕ್ರಿಕೆಟ್ ಆಡಬೇಕು ನೋಡಲು ಆಕರ್ಷಕವಾಗಿರಬೇಕು ಅಂಥವರನ್ನೇ ಈ ಕಂಪನಿಗಳು ಹುಡುಕಿ ಜಾಹೀರಾತು ನಿಡುತ್ತವೆ. ಇದರಿಂದ ಕ್ರಿಕೆಟಿಗರು ದೇಶಕ್ಕಾಗಿ ಆಡುವ ಬದಲು ಸ್ವಂತಕ್ಕಾಗಿ ಆಡುವ ಸಾದ್ಯತೆ ಇದೆ ಎನ್ನವು ಕಳವಳ ಭೂಪಿಂದರ್ ಸಿಂಗ್ ವ್ಯಕ್ತಪಡಿಸಿದರೆ, ಅರುಣ್ ಲಾಲ್ ನಿಲುವೇ ಬೇರೆ. ಜಾಹೀರಾತು ಎನ್ನುವುದು ಪ್ರೋತ್ಸಾಹಕರ ಧನ. ಒಳ್ಳೆ ಆಡಿದರೆ ಜಾಹೀರಾತು ಸಿಗುತ್ತದೆ. ನಿಧಾನವಾಗಿ ಆಡುತ್ತಾನೆ ಎಂದಾದರೆ ಅಂಥ ಆಟಗಾರರನ್ನು ಹೊರಗಟ್ಟುವ ಕೆಲಸ ಆಯ್ಕೆಗಾರರು ಮಾಡಬೇಕಾಗುತ್ತದೆ ಅದು ಬಿಟ್ಟು ಜಾಹೀರಾತು ಕೆಟ್ಟದು ಎನ್ನುವುದು ಹಾಸ್ಯಾಸ್ಪದ ಎನ್ನುತ್ತಾರೆ ಅರುಣ್ ಲಾಲ್. ತಂಡದ ಮ್ಯಾನೇಜರ್ ಸಂಜಯ್ ಜಗದಾಲೆ ಹೇಳುವ ಪ್ರಕಾರ ತಂಡದ ಕ್ರಿಕೆಟಿಗರಲ್ಲಿ ಒಬ್ಬರಿಗೊಬ್ಬರು ಕೂಡಿ ಬರುತ್ತಿರಲಿಲ್ಲ. ತಂಡದಲ್ಲಿ ಆಯ್ಕೆಯಾಗಿದ್ದರೂ ವಿಶ್ವಕಪ್‌ನ ಒಂದೂ ಪಂದ್ಯದಲ್ಲಿ ಆಡಿರದಿದ್ದ ಶ್ರೀಶಾಂತ್ ಮತ್ತು ಜಹೀರ್ ಖಾನ್ ನಡುವೆ ಡ್ರೆಸಿಂಗ್ ರೂಮ್‌ನಲ್ಲಿ ಹೊಡೆದಾಟವೇ ಸಂಭವಿಸಿತ್ತಿತ್ತಂತೆ. ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಕತೆ ಎಲ್ಲರಿಗೂ ಗೊತ್ತಿದೆ ಆದರೆ ಸೋತಾಗ ಮಾತ್ರ ಎಲ್ಲರೂ ಬೆರಳು ತೋರಿಸುತ್ತಾರೆ. ಗೆದ್ದಾಗ ಎಲ್ಲವೂ ಮರೆಯಾಗುತ್ತದೆ. ತಪ್ಪುಗಳಿವೆ ಸಹಜ ಆದರೆ ಅದನ್ನು ಸರಿಪಡಿಸುವತ್ತ ಗಮನಹರಿಸಬೇಕಾಗಿದೆ. ಬಿಸಿಸಿಐ ವಿಶ್ವದಲ್ಲಿಯೇ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರಬಹುದು. ಆದರೆ ಕ್ರಿಕೆಟ್‌ನಲ್ಲೂ ಇದರ ಆಸಕ್ತಿ ಪೂರ್ಣ ತೋರಿಸದ ಕಾರಣ ಭಾರತೀಯ ಕ್ರಿಕೆಟ್ ವಿಶ್ವದಲ್ಲಿ ನಂ.೧ ಆಗಲಿಲ್ಲ ಎನ್ನುತ್ತಾರೆ ಕಪಿಲ್ ದೇವ್. ಮ್ಯಾಚ್ ಫಿಕ್ಸಿಂಗ್ ಆಟವನ್ನು ಕೊಲೆ ಮಾಡಿದರೆ ಈ ಜಾಹೀರಾತು ಎಂಬದು ನಿಧಾನ ವಿಷದಂತೆ ಕ್ರಿಕೆಟ್ ಎಂಬ ದೇಹದ ಮೇಲೆ ಪಸರಿಸುತ್ತಿದೆ. ಇದರಿಂದ ಪಾರು ಮಾಡುವವರು ಯಾರು ?
2007-06-05
ಉಗ್ರ ಹಿಂದುತ್ವ ಬಿಟ್ಟರು, ಮುಸ್ಲಿಮರೂ "ಕೈ’ ಕೊಟ್ಟರು
ಜಿತೇಂದ್ರ ಕುಂದೇಶ್ವರ॥
ಮಂಗಳೂರು: ಮುಖ್ಯಮಂತ್ರಿ, ಉಪಮಖ್ಯಮಂತ್ರಿ, ಸಚಿವರ ಭರpuರ ಆಶ್ವಾಸನೆಯನ್ನು ಬದಿಗೊತ್ತಿದ ಜನ ಕಾಂಗ್ರೆಸ್‌ನ ಯು।ಟಿ।ಖಾದರ್‌ಗೆ ಬೆಂಬಲ ಸೂಚಿಸಿದ್ದಾರೆ। ಅಬೂಬಕ್ಕರ್ ನಾಟೆಕಲ್ ಅವರ ಪರೋಪಕಾರದ ಸಾತ್ವಿಕ ಮನಸ್ಸಿಗಿಂತ ಖಾದರ್‌ನ ಬಿಸಿರಕ್ತದ ಮನಸ್ಸೆ ಉಳ್ಳಾಲ ಮುಸ್ಲಿಮರಿಗೆ ಇಷ್ಟವಾದಂತಿದೆ। ಬಿಜೆಪಿಯ ಯಾವುದೇ ಸಚಿವರ ಆಶ್ವಾಸನೆ, ಕೋಮು ಸೌಹಾರ್ದವನ್ನು ಜನ ನಂಬದ ಕಾರಣ ಚಂದ್ರಶೇಖರ ಉಚ್ಚಿಲ ಅವರು ಸೋಲೊಪ್ಪಿಕೊಳ್ಳಬೇಕಾಯಿತು. ನಮ್ಮ ಸಮುದಾಯದ ಇಬ್ಬರು ಕಣದಲ್ಲಿದ್ದಾರೆ, ಕೋಮುವಿಚ್ಛಿದ್ರಾಕಾರಿ ಶಕ್ತಿಗಳಿಗೆ ಗೆಲುವಾಗದಂತೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ಎಂದು ಮುಸ್ಲಿಮ್ ಸಮುದಾಯದವರು ಶುಕ್ರವಾರ ಪ್ರಾರ್ಥನೆ ಮಾಡುವಾಗ ಸೂಚನೆ ಹೊರಗೆಡಹಿದ್ದರು. ಇದು ಖಾದರ್‌ಗೆ ವರದಾನವಾಯಿತು. ಸಾಂಪ್ರದಾಯಿಕ ವೈರಿಗಳಾದ ಸಲಫಿಗಳು ಈ ಹಿಂದೆ ಸುನ್ನಿ ಸಮುದಾಯಕ್ಕೆ ವಿರೋಧವಾಗಿ ಮತ ಚಲಾಯಿಸುತ್ತಿದ್ದರು ಈ ಬಾರಿ ಬಿಜೆಪಿ ಸೋಲಿಗಾಗಿ ಒಟ್ಟಾಗಿದ್ದಾರೆ. ಸಲಫಿ ಮುಂದಾಳು ಇಸ್ಮಾಯಿಲ್ ಶಾಫಿ ಅವರು ಖಾದರ್‌ನ " ಒಂದಷ್ಟು ಮೌಲ್ಯದ’ ಮನವಿ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದು ಬಿಜೆಪಿ ಸೋಲಿಗೆ ಕಾರಣವಾಗಿದೆ. ಶ್ರೀರಾಮಸೇನೆಯವರು ಮಾತ್ರ ಇಲ್ಲಿ ಹಿಂದುತ್ವಕ್ಕೆ ಬೆಂಬಲ ನೀಡದೆ ಬಿಜೆಪಿ ಸೋಲಿಗೆ ಶ್ರಮಿಸಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದು, ಸಿಪಿಎಂ ಮತಗಳಿಕೆ ಹಿನ್ನಡೆಯಾಗಿರುವುದು ಈ ಎಡಪಂಥೀಯ ಚಿಂತನೆ ಮತಗಳು ಕಾಂಗ್ರೆಸ್‌ಗೆ ಹೊರಳಿರುವುದು ಜಯದ ಅಂತರವನ್ನು ಹೆಚ್ಚಿಸಿತು. ಇನ್ನೊಂದು ಮಖ್ಯ ಕಾರಣ ತ್ರಿಕೋನ ಸ್ಪರ್ಧೆ ನಡೆಯದೆ ಇರುವುದು. ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಜೆಡಿಎಸ್ ಈ ಬಾರಿ ನಿರ್ಣಾಹಕ ಎಂದೇ ಭಾವಿಸಲಾಗಿತ್ತು. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಉಳ್ಳಾಲದ ಚಿತ್ರಣವನ್ನೇ ಮೂರು ತಿಂಗಳೊಳಗೆ ಬದಲಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹೇಳಿದ್ದರು. ಆದರೆ ಜೆಡಿಎಸ್ ಠೇವಣಿ ಉಳಿಸಿಕೊಂಡರೆ ಎಂಬ ಮಾತು ಹೇಳಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತೋ ಎನೊ. ಠೇವಣಿ ಉಳಿಸಿಕೊಳ್ಳುವುದೇ ಜೆಡಿಎಸ್‌ಗೆ ಮಾಡು ಇಲ್ಲವೆ ಮಡಿ ಹೋರಾಟದಂತಿರುವ ಕಾರಣ ಈ ಮಾತು. ಮುಖ್ಯಮಂತ್ರಿ ಕುಮಾರ ಸ್ವಾಮಿಯ ಚರಿಶ್ಮಾ ಮಾತಿಗಷ್ಟೇ ಸೀಮಿತವಾಗಿದೆ. ಮಾಧ್ಯಮಗಳಲ್ಲಿ ಮಿಂಚಿದ ಅವರು ತಮ್ಮ ಹಿಂದೆ ಬಂದಿದ್ದ ಜನ ಸಮೂಹವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲವಾದರು. ಜೆಡಿಎಸ್ ಹಿಂದೆ ತಿರುಗುತ್ತಿದ್ದ ಜನರೇ ಆ ಪಕ್ಷಕ್ಕೆ ಓಟ್ ಹಾಕಿರುವುದು ಅನುಮಾನ. ಉಗ್ರ ಹಿಂದುತ್ವ, ಮುಸ್ಲಿಮರು ವಿರೋಧವನ್ನು ಪ್ರತಿ ಚುನಾವಣೆಯಲ್ಲಿ ಮೈಗೂಡಿಸಿಕೊಂಡಿದ್ದ ಬಿಜೆಪಿ, ಉಳ್ಳಾಲದಲ್ಲಿ ಮಾತ್ರ ಕೋಮು ಸೌಹಾರ್ದವನ್ನು ಹೇಳಿಕೊಂಡು ತಿರುಗುತ್ತಿತ್ತು. ಏಕೆಂದರೆ ಅಲ್ಲಿ ಮುಸ್ಲಿಮರ ಏರಿಯಾ, ಮುಸ್ಲಿಮರನ್ನು ಓಲೈಸದಿದ್ದರೆ ಮತ ಸಿಗದು, ಉಗ್ರಹಿಂದುತ್ವ ಬೇಡ ಎಂದು ತೀರ್ಮಾನಿಸಿದ್ದರು. ಹಾಗಾಗಿ ನರೇಂದ್ರ ಮೋದಿ, ಸುಶ್ಮಾ ಸ್ವರಾಜ್ ಅಂಥವರು ಪ್ರಚಾರಕ್ಕೆ ಉಳ್ಳಾಲಕ್ಕೆ ಬರುವುದು ಬೇಡ ಎಂದು ತೀರ್ಮಾನಿಸಲಾಗಿತ್ತು. ಆದರೆ ಆದ್ದದೇನು ...ಅತ್ತ ಹಿಂದುತ್ವವೂ ಇಲ್ಲ ಇತ್ತ ಮುಸ್ಲಿಮರ ಓಟೂ ಇಲ್ಲ. ಕೈ ಕೈ ಹಿಸುಕಿಕೊಳ್ಳಬೇಕಾದ, ಇಂಗು ತಿಂದ ಮಂಗನಂತಾದ ಪರಿಸ್ಥಿತಿ.
2007-06-04
2007-06-02
ಕೋರ್ಟ್‌ಗಳು ಸುದ್ದಿಯಾಗುವ ಮೇನಿಯಾ ಆರಂಭವಾಗಿದೆ। ಓಬಿಸಿ ಮೀಸಲು ನೀತಿ ಇರಬಹುದು, ಅಥವಾ ಶಿಲ್ಪಾ -ಗೇರ್ ಕಿಸ್ ಪ್ರಕರಣದಲ್ಲಿ ಬಂಧನ ವಾರಂಟ್ ಹೊರಡಿಸಿದ ಕ್ರಮ ಇರಬಹುದು. ಸಂಸದರ ಅಧಿಕಾರದ ಬಗ್ಗೆ ಕೋರ್ಟ್ ತಲೆ ಹಾಕಬಾರದು ಎಂಬರ್ಥದಲ್ಲಿ ಸ್ಪೀಕರ್ ಹೇಳುವ ಮೂಲಕ ಕೋರ್ಟ್‌ಗಳು ಮತ್ತೆ ವಿವಾದದ ಕಟಕಟೆಯಲ್ಲಿ ನಿಂತಿದೆ. ಓಬಿಸಿ ಮೀಸಲು ವಿಷಯದಲ್ಲಿ ಕೋರ್ಟ್ ಅತಿ ಉತ್ತಮ ಎನ್ನಬಹುದಾದ ಕ್ರಮ ಕೈಗೊಂಡಿವೆಯಾದರೂ ಕೆಲವೆಡೆ "ರಿಟ್ ಅರ್ಜಿ’ಯ ಪ್ರಚಾರದ ಮರ್ಜಿಗೆ ಸಿಲುಕುತ್ತಿರುವುದು ಮಾತ್ರ ವಿಷಾದನೀಯ.
ಗೇರ್ ಶಿಲ್ಪಾಗೆ ಕಿಸ್ ಕೊಟ್ರೆ ಜೈಪುರಕ್ಕೇನು ಬಿಸಿಹಾಲಿವುಡ್ ನಟ ರಿಚರ್ಡ್ ಗೇರ್ ಏಡ್ಸ್ ಜಾಗೃತಿ ಕಾರ್‍ಯಕ್ರಮದಲ್ಲಿ ಶಿಲ್ಪಾಗೆ ಆಲಿಂಗನ, ಚುಂಬನದ ಕಿಸ್ ನೀಡಿದಾಗ ಮಾಧ್ಯಮಗಳು ಪದೇ ಪದೇ ತೋರಿಸಿ ಟಿಆರ್‌ಪಿ ರೇಟ್ ಏರಿಸಲು ನೋಡಿದವು. ಜನ ತಪ್ಪು, ತಪ್ಪು ಎಂದು ಪದೇ ಪದೇ ನೋಡಿ ಮನಸ್ಸಲ್ಲೆ ಮೆಲುವಾಗಿ ಮೆಲ್ಲಿದರು. ಮಾಧ್ಯಮದವರು ಪ್ರಚಾರ ನೀಡಿದ್ದು ತಪ್ಪು ಎಂದು ಹೇಳುತ್ತಾ ಈ ಬಗ್ಗೆ ಚರ್ಚಾ ಕಾರ್‍ಯಕ್ರಮ, ಸಂವಾದ ನಡೆಸಿದ ಕೆಲವರು ತಾವು ಚರ್ಚೆ ಮಾಡಿದ್ದುಮಾತ್ರ ಸರಿ ಎಂದು ಹೇಳಿಕೊಂಡರು ! ಇನ್ನು ಕೆಲವರು ಕಿಸ್ ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡರು. ಆದರೆ ಇದನ್ನು ಪ್ರಚಾರಕ್ಕೆ ಬಳಸಿಕೊಂಡದ್ದು ಜೈpuರ, ಇಂದೋರ್‌ನವರು. ಅಶ್ಲೀಲ ಕಿಸ್ ಇದು ಎಂದು ಸಾರ್ವಜನಿಕ ಹಿತಾಸಕ್ತಿ ಹೆಸರಲ್ಲಿ ಸ್ವ ಹಿತಾಸಕ್ತಿಯ ರಿಟ್ ಅರ್ಜಿ ದಾಖಲಿಸಿದರು. ಇಡೀ ಭಾರತದಲ್ಲಿ ಈ ಜೈpuರ, ಇಂಧೋರ್‌ನವರಿಗೆ ಮಾತ್ರ ಕಿಸ್ ಕೊಟ್ಟದ್ದಕ್ಕೆ ಏಕೆ ಇಷ್ಟು ತಲೆ ಬಿಸಿ ? ಈ ಬಗ್ಗೆ ಮತ್ತಷ್ಟು ಕೆದಕಿದರೆ ಇಲ್ಲಿನವರ ಪ್ರಚಾರ ತೆವಲು ಅಥವಾ ಮೂಲಭೂತವಾದಿ ಗುಣ ಎದ್ದು ತೋರುತ್ತಿದೆ. ಧೂಮ್ -೨ರಲ್ಲಿ ಐಶ್ವರ್‍ಯ ರೈ ಮತ್ತು ಹೃತಿಕ್ ರೋಶನ್ ಕಿಸ್ ಪ್ರಕರಣದ ಬಗ್ಗೆಯೂ ಇದೇ ಇಂದೋರ್‌ನಲ್ಲಿ ರಿಟ್ ಪ್ರಕರಣ ದಾಖಲಿಸಲಾಗಿತ್ತು. ಕ್ವಾಯಿಶ್‌ನ ಮಲ್ಲಿಕಾ ಶೆರಾವತ್ ೧೭ ಬಿಸಿ, ಬಿಸಿ ಕಿಸ್ ಕೂಡ ಇಲ್ಲಿ ಪ್ರಶ್ನಿಸಲಾಗಿತ್ತು. ಇವರಿಗೆ ಮಾತ್ರ ಭಾರತೀಯ ಸಂಸ್ಕೃತಿ ಗುತ್ತಿಗೆ ಕೊಟ್ಟಿದ್ದೆ ಎನ್ನುದಕ್ಕಿಂತ ಇವರಿಗೆ ಕೀಳು ಮಟ್ಟದ ಪ್ರಚಾರದ ಆಸೆ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅಂದರೆ ಗೇರ್ -ಶಿಲ್ಪಾಳಿಗೆ ಎಲ್ಲರ ಎದುರು ಅತಿರೇಕದ ಕಿಸ್ ನೀಡಿರುವುದು ಸರಿ ಎಂಬುದು ವಾದವಲ್ಲ. ಅದಕ್ಕಿಂತ ಹೆಚ್ಚಿನ ಅಸಂಸ್ಕೃತಿ ಬಗ್ಗೆ, ಜಾಗತೀಕರಣದ ಕೊಡುಗೆ ಈಗಿನ ಯುವಜನರ ವೀಕೆಂಡ್ ಪಾರ್ಟಿ, ಸೆಕ್ಸ್ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿರುವ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂಬುದೇ ಬೇಸರ. ಇನ್ನೊಂದೆಡೆ ಗೇರ್, ಶಿಲ್ಪಾ ಮತ್ತು ಏಡ್ಸ್ ಜಾಗೃತಿ ಕಾರ್‍ಯಕ್ರಮ ಸಂಘಟಕರು ಬಯಸಿದ್ದು ಇಂಥಹುದೇ ಪ್ರಚಾರದ ಆಸೆಯ ಹಿನ್ನೆಲೆಯಿಂದ ಎಂಬುದು ಗಮನಿಸಬೇಕು.ಆದರೆ ಇದನ್ನು ತಪ್ಪು, ತಪ್ಪು ಅಶ್ಲೀಲ ಎಂದು ಪ್ರತಿಭಟಿಸುವವರೆಲ್ಲಾ ಸಾಚಾಗಳೇ ಎಂದರೆ ಊಹ್ಙೂಂ ! ಪ್ರತಿಭಟನೆ ಸೊಲ್ಲೆತ್ತುವವರಲ್ಲಿ ಅ ನ್ಯರ ಸಂಗ ಮಾಡಿದವರು, ಬ್ಲೂ ಫಿಲ್ಮ್ ನೋಡಿದವರು ಅಥವಾ ಅನ್ಯರ ಸಂಗ ಮಾಡದಿದ್ದರೂ ಆಸೆ ಇದ್ದು ಅವಕಾಶ ಸಿಗದವರು ಇಲ್ಲವೇ ಇಲ್ಲ ಎಂದರೆ ಅದು ಸಂpooರ್ಣ ತಪ್ಪಾದೀತು. ಬಹಳ ಹಿಂದೆ ನಡೆದ ಘಟನೆಯೊಂದನ್ನು ಉಲ್ಲೇಖಿಸಬಯಸುತ್ತೇನೆ. ರಾತ್ರಿ ಬಸ್‌ನಲ್ಲಿ ದೂರದ ಊರಿಗೆ ತೆರಳುತ್ತಿದ್ದ ಸಂದರ್ಭ ಬಸ್‌ನೊಳಗೆ ಯುವಕನೊಬ್ಬ ಹುಡುಗಿಯ ಕೈ ಮೈ ಸವರುತ್ತಿದ್ದ. ಆಕೆ ತನ್ನೊಂದಿಗಿದ್ದ ಮನೆಯವರಲ್ಲಿ ದೂರು ನೀಡಿದಾಗ ಅವರು ಯುವಕನ ಮೇಲೆ ಅವರು ಏರಿಹೋದರು. ಅಷ್ಟು ಹೊತ್ತಿಗೆ ಗಲಾಟೆ ಮಧ್ಯೆ ಪ್ರವೇಶಿಸಿದ ಮಧ್ಯವಯಸ್ಕನೊಬ್ಬ ಯುವಕನ ಮುಖ ಮೂತಿ ನೋಡದೆ ಬಾರಿಸಿದ. ಯುವಕ ಕುನ್ನಿಯ ಹಾಗೆ ಬೊಬ್ಬೆ ಹೊಡೆದರೂ ಬಿಡಲಿಲ್ಲ. ಎಲ್ಲರೂ ಆ ಮಧ್ಯವಯಸ್ಕ ಹುಡುಗಿಯ ಕಡೆಯವ ಎಂದೇ ತಿಳಿದಿದ್ದರು. ಗಲಾಟೆ ಮುಗಿಯಿತು, ಮಧ್ಯವಯಸ್ಕ ಯುವತಿ ಪಕ್ಕದಲ್ಲಿ ನಿಂತ. ಬಸ್ ಸಾಗುತ್ತಿತ್ತು. ಆದರೆ ಒಳಗಡೆ ಮತ್ತ ಕನಲಿಕೆ ಆರಂಭವಾಗಿತ್ತು. ಯುವತಿ ಕೊಸರಾಡುತ್ತಿದ್ದಳು. ಈ ಮಧ್ಯವಯಸ್ಕ ಆ ಯುವಕನಿಗಿಂತ ಒಂದು "ಕೈ’ ಹೆಚ್ಚೇ ಕಿರುಕುಳ ನೀಡುತ್ತಿದ್ದ. ಮನೆಯವರು ಮತ್ತೆ ಹೆಚ್ಚಿಗೆ ತಗಾದೆ ಮಾಡದೆ ಯುವತಿಯನ್ನು ತಮ್ಮ ನಡುವೆಯೇ ಕುಳ್ಳಿರಿಸಿಕೊಂಡರು. ಆಗ ಆಶ್ಚರ್‍ಯವಾಗಿತ್ತು, ಹೀಗೂ ಜನಾ ಇರ್‍ತಾರೆಯೇ ಎಂಬುದು. ಹಾಗಾಗಿ ಪ್ರತಿಭಟನೆ ಮಾಡುವವರೆಲ್ಲಾ ಸಾಚಾ ಇರುವುದಿಲ್ಲ "ನನಗಂತೂ ಸಿಕ್ಕಿಲ್ಲ, ಅವನಿಗೂ ಬೇಡ’ ಅವನಿಗೆ ಸಿಗಬಾರದು, ನನಗೇ ಬೇಕು ಎಂಬ ಅಸೂಯೆಯೂ ಪಾತ್ರ ವಹಿಸುತ್ತದೆ ಎಂದು ತರ್ಕಿಸಬಹುದಾಗಿದೆ. ಇತ್ತೀಚೆಗೆ ಕರಾವಳಿಯಲ್ಲಿ ಹೊರ ಬರುತ್ತಿರುವ ಯುವ ಪ್ರೇಮಿಗಳಿಗೆ ದಿಗ್ಬಂಧನ, poಲೀಸರಿಗೆ ದೂರು, ಜೋಡಿ ಥಳಿತ ಮುಂತಾದ ಪ್ರಕರಣಗಳ ಹಿಂದೆ ಇಂಥಹುದೇ ಅಸೂಯೆ ಮನೆ ಮಾಡಿರುತ್ತದೆ ಎಂದು ಊಹಿಸಬಹುದು. ಇದೆಲ್ಲಾ ಮಾನವ ಸಹಜ ಗುಣಗಳೇ ! ಈಗ ಶಿಲ್ಪಾ ಶೆಟ್ಟಿ ವಿಷಯಕ್ಕೆ ಬರುವ. ಶಿಲ್ಪಾ ಶೆಟ್ಟಿಗೆ ಈಗ ವಿದೇಶದಲ್ಲಿ ಭಾರಿ ಡಿಮಾಂಡ್ ಇದೆ, ಇದೇ ಸಂದರ್ಭದಲ್ಲಿ ವಿದೇಶಕ್ಕೆ ಹೋಗದಂತೆ ಮಾಡಿರುವ ಹಿಂದೆ ಮಸಲತ್ತು ಇರುವುದು ಸಜಹ ಅನಿಸುತ್ತದೆ ಅಲ್ವೆ. ಶಿಲ್ಪಾಗೆ ವಿದೇಶಕ್ಕೆ ತೆರಳದಂತೆ ಕೋರ್ಟ್ ಆದೇಶ ಹೊರಡಿಸಿದೆ. ಗೇರ್‌ಗೆ ಬಂಧನ ವಾರಂಟ್ ! ಪಾಪ ಗೇರ್‌ಗೆ ಏನು ಗೊತ್ತು, ವಿದೇಶದಲ್ಲಿ ಅದು ವೆರಿ ಕಾಮನ್ ! ಇಲ್ಲಿ ಬಂದು ಟಾಪ್‌ಗೇರ್‌ನಿಂದ ಸೀದ ಬ್ರೇಕ್ ಫೈಲ್ ಆದ ಹಾಗೆ ಆಗಿದೆ.