शिल्पा किस गेर नो प्रॉब्लम ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
शिल्पा किस गेर नो प्रॉब्लम ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

2007-06-13






  • ಹಣ ಕಂಡರೆ, ಹೆಣ ಬಾಯಿಬಿಡುತ್ತದೆ।
jitendra kundeshvar
ಪಿಚ್‌ನಲ್ಲಿ ಮಣ್ಣು ಇರುವದಲ್ಲಿ ನೋಟಿನ ಕಂತೆಗಳೇ ಇದೆ। ಆದರೆ ಇದು ಭಾರತೀಯ ಕ್ರಿಕೆಟ್‌ಗೆ ಹಿಡಿ ಮಣ್ಣು ಆಗದಿರಲಿ. ಕ್ರಿಕೆಟಿಗರು ದೇಶಕ್ಕೆ ಆಡುತ್ತಿಲ್ಲ. ತಮ್ಮ ಸ್ಥಾನ ಭದ್ರತೆಗೆ ಮತ್ತು ಹಣ ಥೈಲಿಗಾಗಿ. ಕೋಟಿಗಟ್ಟಲೆ ಬರುವ ಹಣಕ್ಕಾಗಿ. ಎಂಡೋಸಿಂಗ್ ಜಾಹೀರಾತು ಅಂದರೆ ಎಷ್ಟು ಹೊತ್ತು ಮೈದಾನದಲ್ಲಿ ಆಟಗಾರ ಇರುತ್ತಾನೊ ಅವನಿಗೆ ಅಷ್ಟು ಹೊತ್ತು ಹೆಚ್ಚು ಹಣ ನೀಡುತ್ತವೆ. ಟಿವಿಗಳಲ್ಲಿ ತೋರಿಸುವ ಜಾಹೀರಾತಿನ ಸಮಯದಂತೆ. ಈ ಹಣ ಸೌರವ್ ಗಂಗೂಲಿ ಮಾತ್ರವಲ್ಲ ಎಲ್ಲ ಕ್ರಿಕೆಟಿಗರಿಗೂ ಸಿಗುತ್ತದೆ ಎಂಬುದನ್ನು ಆಯ್ಕೆಗಾರರೇ ಬಾಯಿ ಬಿಟ್ಟಿದ್ದಾರೆ. ಬಾಂಗ್ಲಾ ಎದುರು ಗಂಗೂಲಿ ಆಡಿದ ನಿಧಾನಗತಿ ಆಟಕ್ಕೆ ಇದೇ ಕಾರಣ ಎಂಬುದನ್ನೂ ಆಯ್ಕೆಗಾರರು ಒಪ್ಪುತ್ತಾರೆ. ಹಾಗಾದರೆ ಕ್ರಿಕೆಟ್ ಎಲ್ಲಕ್ಕಿಂತ ಮೇಲು ಎನ್ನುತ್ತಿದ್ದ ಇವರು ಇದೀಗ ಹಣವೇ ಎಲ್ಲಕ್ಕಿಂತ ಮೇಲು ಅನ್ನತೊಡಗಿದ್ದಾರೆ. ಲಡೇಂಗೆ ಜೀತೇಂಗೆ ಎನ್ನುತ್ತಿದ್ದ ಕ್ರಿಕೆಟಿಗರು ತಮ್ಮೊಳಗೆ ಹೊಡೆದಾಡಿಕೊಂಡು ಭಾರತದ ಅಸಂಖ್ಯ ಕೋಟಿ ಅಭಿಮಾನಿಗಳ ಹೃದಯವನ್ನು ಒಡೆದು ಬಿಟ್ಟರೇ ಛೆ. ಯುವರಾಜ್ ಸಿಂಗ್‌ಗೆ ರಾತ್ರಿ ಮಜಾ ಪಾರ್ಟಿಗಳಿಂದಲೇ ಉಪನಾಯಕ ಹುದ್ದೆ ನೀಡಿಲ್ಲ ಎನ್ನುತ್ತಾರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಆಯ್ಕೆಗಾರ ಭೂಪಿಂದರ್ ಸಿಂಗ್. ಕಿಮ್ ಶರ್ಮ ಜತೆ ಮಜಾ ಉಡಾಯಿಸುತ್ತಿದ್ದ ಯುವರಾಜ್ ಕ್ರಿಕೆಟ್‌ನಲ್ಲಿ ಹೊಡೆಬಡಿಯ ದಾಂಡಿಗನೋ ಹಾಗೆಯೇ ಜೀವನದಲ್ಲೂ ಕೂಡಾ. ಫೋಟೊ ಗ್ರಾಫರ್ ಜತೆ, ಮನೆಗೆ ಬಂದ ಅತಿಥಿಗಳ ಜತೆ ಜಗಳವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗಳೂ ಇವೆ. ಇದೇ ಪಾರ್ಟಿ ವಿಷಯದಲ್ಲಿ ಈತನಿಗೆ ಕೋರ್ಟ್‌ನಲ್ಲಿ ಜಾಮೀನು ಸಿಕ್ಕಿದೆ ಕೂಡ. ಜಹೀರ್ ಖಾನ್, ಪಠಾಣ್ ಅವರ ಪ್ರೇಮ ಪ್ರಕರಣಗಳು ತೀರಾ ಇತ್ತೀಚಿನ ಧೋನಿ- ಹಸೀನ್ ಚುಂಬನ ಪ್ರಕರಣಗಳಿಂದ ಕ್ರಿಕೆಟ್ ತಾರೆಯರಿಗೆ ಸಿಗುವ ಅಭಿಮಾನದ ಆಳ ಅರ್ಥವಾಗುತ್ತದೆ ಹೀಗಿರುವಾಗ ಅವರು ದಾರಿ ತಪ್ಪುವುದರಲ್ಲಿ ಸಂಶಯವಿಲ್ಲ. ಇವರು ಹೊರಗಡೆ ಏನೇ ಮಾಡಲಿ ತಂಡ ಗೆದ್ದರೆ ಏನೂ ಹೇಳುವುದಿಲ್ಲ. ಆಯೆ ಆಣುಮಗೆ ಮಲ್ತೆ’ ಎನ್ನುತ್ತಾರೆ ಆದರೆ ಆಡದೆ ಉಳಿದು ರಾಜಕೀಯ ಮಾಡಿದರೆ ಮಾತ್ರ ಯಾರೂ ಕ್ಷಮಿಸುವುದಿಲ್ಲ ಅಷ್ಟೆ. ಭಾರತ ಕ್ರಿಕೆಟ್ ಆಟಗಾರರನ್ನು ಆಯ್ಕೆಮಾಡುವ ಮಹನೀಯರು ಹೇಳಿದ್ದೇನು ಗೊತ್ತೆ. ಮೊದಲನೇಯದಾಗ ಭೂಪಿಂದರ್ ಸಿಂಗ್ ಸೀನಿಯರ್-ದ್ರಾವಿಡ್‌ಗೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಸಹಕಾರ ನೀಡುತ್ತಿರಲೇ ಇಲ್ಲ. ಗುಪುಗಾರಿಕೆ ಇತ್ತು. ಸೆಹವಾಗ್, ಸಚಿನ್, ಹರ್ಭಜನ್ ಜತೆ ದಿನಗಟ್ಟಲೆ ಮಾತನಾಡುತ್ತಿರಲಿಲ್ಲ. ಬಿಸಿಸಿಐ ಕಾರ್‍ಯದರ್ಶಿ ನಿರಂಜನ್ ಶಾ ಹೀಗೆ ಹೇಳ್ತಾರೆ. ಚಾಪೆಲ್‌ಗೆ ಅಹಂಕಾರ ಹೆಚ್ಚು ಎಲ್ಲರೂ ತಾನು ಹೇಳಿದ್ದು ಕೇಳಬೇಕು ಎಂಬ ಗರ್ವ ಮನೆ ಮಾಡಿತ್ತು. ಸ್ನೇಹಿತರಂತೆ ವರ್ತಿಸಬೇಕಿದ್ದ ಗುರು ಚಾಪೆಲ್ ಶಾಲೆ ಮೇಷ್ಟ್ರಂತೆ ಬೆತ್ತ ಹಿಡಿದು ಮಕ್ಕಳಿಗೆ ದಂಡಿಸಿ ಪಾಠ ಮಾಡುವಂತೆ ಕಾಣುತ್ತಿದ್ದರು. ಜಾಹೀರಾತು ಕಂಪನಿಗಳು ಪ್ರಭಾವ ಬೀರುತ್ತಿವೆ. ಹಾಗಾಗಿ ಬಿಸಿಸಿಐ ಜಾಹೀರಾತು ಕಂಪನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಆದ್ದರಿಂದಲೇ ಇಂಥ ಅವಸ್ಥೆ. ಕ್ರಿಕೆಟ್ ಆಡಬೇಕು ನೋಡಲು ಆಕರ್ಷಕವಾಗಿರಬೇಕು ಅಂಥವರನ್ನೇ ಈ ಕಂಪನಿಗಳು ಹುಡುಕಿ ಜಾಹೀರಾತು ನಿಡುತ್ತವೆ. ಇದರಿಂದ ಕ್ರಿಕೆಟಿಗರು ದೇಶಕ್ಕಾಗಿ ಆಡುವ ಬದಲು ಸ್ವಂತಕ್ಕಾಗಿ ಆಡುವ ಸಾದ್ಯತೆ ಇದೆ ಎನ್ನವು ಕಳವಳ ಭೂಪಿಂದರ್ ಸಿಂಗ್ ವ್ಯಕ್ತಪಡಿಸಿದರೆ, ಅರುಣ್ ಲಾಲ್ ನಿಲುವೇ ಬೇರೆ. ಜಾಹೀರಾತು ಎನ್ನುವುದು ಪ್ರೋತ್ಸಾಹಕರ ಧನ. ಒಳ್ಳೆ ಆಡಿದರೆ ಜಾಹೀರಾತು ಸಿಗುತ್ತದೆ. ನಿಧಾನವಾಗಿ ಆಡುತ್ತಾನೆ ಎಂದಾದರೆ ಅಂಥ ಆಟಗಾರರನ್ನು ಹೊರಗಟ್ಟುವ ಕೆಲಸ ಆಯ್ಕೆಗಾರರು ಮಾಡಬೇಕಾಗುತ್ತದೆ ಅದು ಬಿಟ್ಟು ಜಾಹೀರಾತು ಕೆಟ್ಟದು ಎನ್ನುವುದು ಹಾಸ್ಯಾಸ್ಪದ ಎನ್ನುತ್ತಾರೆ ಅರುಣ್ ಲಾಲ್. ತಂಡದ ಮ್ಯಾನೇಜರ್ ಸಂಜಯ್ ಜಗದಾಲೆ ಹೇಳುವ ಪ್ರಕಾರ ತಂಡದ ಕ್ರಿಕೆಟಿಗರಲ್ಲಿ ಒಬ್ಬರಿಗೊಬ್ಬರು ಕೂಡಿ ಬರುತ್ತಿರಲಿಲ್ಲ. ತಂಡದಲ್ಲಿ ಆಯ್ಕೆಯಾಗಿದ್ದರೂ ವಿಶ್ವಕಪ್‌ನ ಒಂದೂ ಪಂದ್ಯದಲ್ಲಿ ಆಡಿರದಿದ್ದ ಶ್ರೀಶಾಂತ್ ಮತ್ತು ಜಹೀರ್ ಖಾನ್ ನಡುವೆ ಡ್ರೆಸಿಂಗ್ ರೂಮ್‌ನಲ್ಲಿ ಹೊಡೆದಾಟವೇ ಸಂಭವಿಸಿತ್ತಿತ್ತಂತೆ. ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಕತೆ ಎಲ್ಲರಿಗೂ ಗೊತ್ತಿದೆ ಆದರೆ ಸೋತಾಗ ಮಾತ್ರ ಎಲ್ಲರೂ ಬೆರಳು ತೋರಿಸುತ್ತಾರೆ. ಗೆದ್ದಾಗ ಎಲ್ಲವೂ ಮರೆಯಾಗುತ್ತದೆ. ತಪ್ಪುಗಳಿವೆ ಸಹಜ ಆದರೆ ಅದನ್ನು ಸರಿಪಡಿಸುವತ್ತ ಗಮನಹರಿಸಬೇಕಾಗಿದೆ. ಬಿಸಿಸಿಐ ವಿಶ್ವದಲ್ಲಿಯೇ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರಬಹುದು. ಆದರೆ ಕ್ರಿಕೆಟ್‌ನಲ್ಲೂ ಇದರ ಆಸಕ್ತಿ ಪೂರ್ಣ ತೋರಿಸದ ಕಾರಣ ಭಾರತೀಯ ಕ್ರಿಕೆಟ್ ವಿಶ್ವದಲ್ಲಿ ನಂ.೧ ಆಗಲಿಲ್ಲ ಎನ್ನುತ್ತಾರೆ ಕಪಿಲ್ ದೇವ್. ಮ್ಯಾಚ್ ಫಿಕ್ಸಿಂಗ್ ಆಟವನ್ನು ಕೊಲೆ ಮಾಡಿದರೆ ಈ ಜಾಹೀರಾತು ಎಂಬದು ನಿಧಾನ ವಿಷದಂತೆ ಕ್ರಿಕೆಟ್ ಎಂಬ ದೇಹದ ಮೇಲೆ ಪಸರಿಸುತ್ತಿದೆ. ಇದರಿಂದ ಪಾರು ಮಾಡುವವರು ಯಾರು ?

2007-06-02




ಕೋರ್ಟ್‌ಗಳು ಸುದ್ದಿಯಾಗುವ ಮೇನಿಯಾ ಆರಂಭವಾಗಿದೆ। ಓಬಿಸಿ ಮೀಸಲು ನೀತಿ ಇರಬಹುದು, ಅಥವಾ ಶಿಲ್ಪಾ -ಗೇರ್ ಕಿಸ್ ಪ್ರಕರಣದಲ್ಲಿ ಬಂಧನ ವಾರಂಟ್ ಹೊರಡಿಸಿದ ಕ್ರಮ ಇರಬಹುದು. ಸಂಸದರ ಅಧಿಕಾರದ ಬಗ್ಗೆ ಕೋರ್ಟ್ ತಲೆ ಹಾಕಬಾರದು ಎಂಬರ್ಥದಲ್ಲಿ ಸ್ಪೀಕರ್ ಹೇಳುವ ಮೂಲಕ ಕೋರ್ಟ್‌ಗಳು ಮತ್ತೆ ವಿವಾದದ ಕಟಕಟೆಯಲ್ಲಿ ನಿಂತಿದೆ. ಓಬಿಸಿ ಮೀಸಲು ವಿಷಯದಲ್ಲಿ ಕೋರ್ಟ್ ಅತಿ ಉತ್ತಮ ಎನ್ನಬಹುದಾದ ಕ್ರಮ ಕೈಗೊಂಡಿವೆಯಾದರೂ ಕೆಲವೆಡೆ "ರಿಟ್ ಅರ್ಜಿ’ಯ ಪ್ರಚಾರದ ಮರ್ಜಿಗೆ ಸಿಲುಕುತ್ತಿರುವುದು ಮಾತ್ರ ವಿಷಾದನೀಯ.



ಗೇರ್ ಶಿಲ್ಪಾಗೆ ಕಿಸ್ ಕೊಟ್ರೆ ಜೈಪುರಕ್ಕೇನು ಬಿಸಿಹಾಲಿವುಡ್ ನಟ ರಿಚರ್ಡ್ ಗೇರ್ ಏಡ್ಸ್ ಜಾಗೃತಿ ಕಾರ್‍ಯಕ್ರಮದಲ್ಲಿ ಶಿಲ್ಪಾಗೆ ಆಲಿಂಗನ, ಚುಂಬನದ ಕಿಸ್ ನೀಡಿದಾಗ ಮಾಧ್ಯಮಗಳು ಪದೇ ಪದೇ ತೋರಿಸಿ ಟಿಆರ್‌ಪಿ ರೇಟ್ ಏರಿಸಲು ನೋಡಿದವು. ಜನ ತಪ್ಪು, ತಪ್ಪು ಎಂದು ಪದೇ ಪದೇ ನೋಡಿ ಮನಸ್ಸಲ್ಲೆ ಮೆಲುವಾಗಿ ಮೆಲ್ಲಿದರು. ಮಾಧ್ಯಮದವರು ಪ್ರಚಾರ ನೀಡಿದ್ದು ತಪ್ಪು ಎಂದು ಹೇಳುತ್ತಾ ಈ ಬಗ್ಗೆ ಚರ್ಚಾ ಕಾರ್‍ಯಕ್ರಮ, ಸಂವಾದ ನಡೆಸಿದ ಕೆಲವರು ತಾವು ಚರ್ಚೆ ಮಾಡಿದ್ದುಮಾತ್ರ ಸರಿ ಎಂದು ಹೇಳಿಕೊಂಡರು ! ಇನ್ನು ಕೆಲವರು ಕಿಸ್ ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡರು. ಆದರೆ ಇದನ್ನು ಪ್ರಚಾರಕ್ಕೆ ಬಳಸಿಕೊಂಡದ್ದು ಜೈpuರ, ಇಂದೋರ್‌ನವರು. ಅಶ್ಲೀಲ ಕಿಸ್ ಇದು ಎಂದು ಸಾರ್ವಜನಿಕ ಹಿತಾಸಕ್ತಿ ಹೆಸರಲ್ಲಿ ಸ್ವ ಹಿತಾಸಕ್ತಿಯ ರಿಟ್ ಅರ್ಜಿ ದಾಖಲಿಸಿದರು. ಇಡೀ ಭಾರತದಲ್ಲಿ ಈ ಜೈpuರ, ಇಂಧೋರ್‌ನವರಿಗೆ ಮಾತ್ರ ಕಿಸ್ ಕೊಟ್ಟದ್ದಕ್ಕೆ ಏಕೆ ಇಷ್ಟು ತಲೆ ಬಿಸಿ ? ಈ ಬಗ್ಗೆ ಮತ್ತಷ್ಟು ಕೆದಕಿದರೆ ಇಲ್ಲಿನವರ ಪ್ರಚಾರ ತೆವಲು ಅಥವಾ ಮೂಲಭೂತವಾದಿ ಗುಣ ಎದ್ದು ತೋರುತ್ತಿದೆ. ಧೂಮ್ -೨ರಲ್ಲಿ ಐಶ್ವರ್‍ಯ ರೈ ಮತ್ತು ಹೃತಿಕ್ ರೋಶನ್ ಕಿಸ್ ಪ್ರಕರಣದ ಬಗ್ಗೆಯೂ ಇದೇ ಇಂದೋರ್‌ನಲ್ಲಿ ರಿಟ್ ಪ್ರಕರಣ ದಾಖಲಿಸಲಾಗಿತ್ತು. ಕ್ವಾಯಿಶ್‌ನ ಮಲ್ಲಿಕಾ ಶೆರಾವತ್ ೧೭ ಬಿಸಿ, ಬಿಸಿ ಕಿಸ್ ಕೂಡ ಇಲ್ಲಿ ಪ್ರಶ್ನಿಸಲಾಗಿತ್ತು. ಇವರಿಗೆ ಮಾತ್ರ ಭಾರತೀಯ ಸಂಸ್ಕೃತಿ ಗುತ್ತಿಗೆ ಕೊಟ್ಟಿದ್ದೆ ಎನ್ನುದಕ್ಕಿಂತ ಇವರಿಗೆ ಕೀಳು ಮಟ್ಟದ ಪ್ರಚಾರದ ಆಸೆ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅಂದರೆ ಗೇರ್ -ಶಿಲ್ಪಾಳಿಗೆ ಎಲ್ಲರ ಎದುರು ಅತಿರೇಕದ ಕಿಸ್ ನೀಡಿರುವುದು ಸರಿ ಎಂಬುದು ವಾದವಲ್ಲ. ಅದಕ್ಕಿಂತ ಹೆಚ್ಚಿನ ಅಸಂಸ್ಕೃತಿ ಬಗ್ಗೆ, ಜಾಗತೀಕರಣದ ಕೊಡುಗೆ ಈಗಿನ ಯುವಜನರ ವೀಕೆಂಡ್ ಪಾರ್ಟಿ, ಸೆಕ್ಸ್ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿರುವ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂಬುದೇ ಬೇಸರ. ಇನ್ನೊಂದೆಡೆ ಗೇರ್, ಶಿಲ್ಪಾ ಮತ್ತು ಏಡ್ಸ್ ಜಾಗೃತಿ ಕಾರ್‍ಯಕ್ರಮ ಸಂಘಟಕರು ಬಯಸಿದ್ದು ಇಂಥಹುದೇ ಪ್ರಚಾರದ ಆಸೆಯ ಹಿನ್ನೆಲೆಯಿಂದ ಎಂಬುದು ಗಮನಿಸಬೇಕು.ಆದರೆ ಇದನ್ನು ತಪ್ಪು, ತಪ್ಪು ಅಶ್ಲೀಲ ಎಂದು ಪ್ರತಿಭಟಿಸುವವರೆಲ್ಲಾ ಸಾಚಾಗಳೇ ಎಂದರೆ ಊಹ್ಙೂಂ ! ಪ್ರತಿಭಟನೆ ಸೊಲ್ಲೆತ್ತುವವರಲ್ಲಿ ಅ ನ್ಯರ ಸಂಗ ಮಾಡಿದವರು, ಬ್ಲೂ ಫಿಲ್ಮ್ ನೋಡಿದವರು ಅಥವಾ ಅನ್ಯರ ಸಂಗ ಮಾಡದಿದ್ದರೂ ಆಸೆ ಇದ್ದು ಅವಕಾಶ ಸಿಗದವರು ಇಲ್ಲವೇ ಇಲ್ಲ ಎಂದರೆ ಅದು ಸಂpooರ್ಣ ತಪ್ಪಾದೀತು. ಬಹಳ ಹಿಂದೆ ನಡೆದ ಘಟನೆಯೊಂದನ್ನು ಉಲ್ಲೇಖಿಸಬಯಸುತ್ತೇನೆ. ರಾತ್ರಿ ಬಸ್‌ನಲ್ಲಿ ದೂರದ ಊರಿಗೆ ತೆರಳುತ್ತಿದ್ದ ಸಂದರ್ಭ ಬಸ್‌ನೊಳಗೆ ಯುವಕನೊಬ್ಬ ಹುಡುಗಿಯ ಕೈ ಮೈ ಸವರುತ್ತಿದ್ದ. ಆಕೆ ತನ್ನೊಂದಿಗಿದ್ದ ಮನೆಯವರಲ್ಲಿ ದೂರು ನೀಡಿದಾಗ ಅವರು ಯುವಕನ ಮೇಲೆ ಅವರು ಏರಿಹೋದರು. ಅಷ್ಟು ಹೊತ್ತಿಗೆ ಗಲಾಟೆ ಮಧ್ಯೆ ಪ್ರವೇಶಿಸಿದ ಮಧ್ಯವಯಸ್ಕನೊಬ್ಬ ಯುವಕನ ಮುಖ ಮೂತಿ ನೋಡದೆ ಬಾರಿಸಿದ. ಯುವಕ ಕುನ್ನಿಯ ಹಾಗೆ ಬೊಬ್ಬೆ ಹೊಡೆದರೂ ಬಿಡಲಿಲ್ಲ. ಎಲ್ಲರೂ ಆ ಮಧ್ಯವಯಸ್ಕ ಹುಡುಗಿಯ ಕಡೆಯವ ಎಂದೇ ತಿಳಿದಿದ್ದರು. ಗಲಾಟೆ ಮುಗಿಯಿತು, ಮಧ್ಯವಯಸ್ಕ ಯುವತಿ ಪಕ್ಕದಲ್ಲಿ ನಿಂತ. ಬಸ್ ಸಾಗುತ್ತಿತ್ತು. ಆದರೆ ಒಳಗಡೆ ಮತ್ತ ಕನಲಿಕೆ ಆರಂಭವಾಗಿತ್ತು. ಯುವತಿ ಕೊಸರಾಡುತ್ತಿದ್ದಳು. ಈ ಮಧ್ಯವಯಸ್ಕ ಆ ಯುವಕನಿಗಿಂತ ಒಂದು "ಕೈ’ ಹೆಚ್ಚೇ ಕಿರುಕುಳ ನೀಡುತ್ತಿದ್ದ. ಮನೆಯವರು ಮತ್ತೆ ಹೆಚ್ಚಿಗೆ ತಗಾದೆ ಮಾಡದೆ ಯುವತಿಯನ್ನು ತಮ್ಮ ನಡುವೆಯೇ ಕುಳ್ಳಿರಿಸಿಕೊಂಡರು. ಆಗ ಆಶ್ಚರ್‍ಯವಾಗಿತ್ತು, ಹೀಗೂ ಜನಾ ಇರ್‍ತಾರೆಯೇ ಎಂಬುದು. ಹಾಗಾಗಿ ಪ್ರತಿಭಟನೆ ಮಾಡುವವರೆಲ್ಲಾ ಸಾಚಾ ಇರುವುದಿಲ್ಲ "ನನಗಂತೂ ಸಿಕ್ಕಿಲ್ಲ, ಅವನಿಗೂ ಬೇಡ’ ಅವನಿಗೆ ಸಿಗಬಾರದು, ನನಗೇ ಬೇಕು ಎಂಬ ಅಸೂಯೆಯೂ ಪಾತ್ರ ವಹಿಸುತ್ತದೆ ಎಂದು ತರ್ಕಿಸಬಹುದಾಗಿದೆ. ಇತ್ತೀಚೆಗೆ ಕರಾವಳಿಯಲ್ಲಿ ಹೊರ ಬರುತ್ತಿರುವ ಯುವ ಪ್ರೇಮಿಗಳಿಗೆ ದಿಗ್ಬಂಧನ, poಲೀಸರಿಗೆ ದೂರು, ಜೋಡಿ ಥಳಿತ ಮುಂತಾದ ಪ್ರಕರಣಗಳ ಹಿಂದೆ ಇಂಥಹುದೇ ಅಸೂಯೆ ಮನೆ ಮಾಡಿರುತ್ತದೆ ಎಂದು ಊಹಿಸಬಹುದು. ಇದೆಲ್ಲಾ ಮಾನವ ಸಹಜ ಗುಣಗಳೇ ! ಈಗ ಶಿಲ್ಪಾ ಶೆಟ್ಟಿ ವಿಷಯಕ್ಕೆ ಬರುವ. ಶಿಲ್ಪಾ ಶೆಟ್ಟಿಗೆ ಈಗ ವಿದೇಶದಲ್ಲಿ ಭಾರಿ ಡಿಮಾಂಡ್ ಇದೆ, ಇದೇ ಸಂದರ್ಭದಲ್ಲಿ ವಿದೇಶಕ್ಕೆ ಹೋಗದಂತೆ ಮಾಡಿರುವ ಹಿಂದೆ ಮಸಲತ್ತು ಇರುವುದು ಸಜಹ ಅನಿಸುತ್ತದೆ ಅಲ್ವೆ. ಶಿಲ್ಪಾಗೆ ವಿದೇಶಕ್ಕೆ ತೆರಳದಂತೆ ಕೋರ್ಟ್ ಆದೇಶ ಹೊರಡಿಸಿದೆ. ಗೇರ್‌ಗೆ ಬಂಧನ ವಾರಂಟ್ ! ಪಾಪ ಗೇರ್‌ಗೆ ಏನು ಗೊತ್ತು, ವಿದೇಶದಲ್ಲಿ ಅದು ವೆರಿ ಕಾಮನ್ ! ಇಲ್ಲಿ ಬಂದು ಟಾಪ್‌ಗೇರ್‌ನಿಂದ ಸೀದ ಬ್ರೇಕ್ ಫೈಲ್ ಆದ ಹಾಗೆ ಆಗಿದೆ.