2008-09-11
ಸೋಮಯಾಜಿಗೆ ಮಂಡೆ ಕೆಟ್ಟಿದೆ
2008-08-12
ಎಲ್ಲ ಲೈವ್ ಶೋ ಹೀಗೆ ..ಪೂರ್ವ ನಿರ್ಧರಿತ . ನನ್ನದು ಕೂಡ
2008-08-07
ಕ್ರೈಂ ವರದಿಗಾರಿಕೆ ಒಂದು ಅನುಭವ
ವಿನಾಯಕ ಭಟ್ರು ದಿಲ್ಲಿಗೆ ಹೋದ ಮೇಲೆ ಮಂಗಳೂರಿನಲ್ಲಿ ನಾನು ಕ್ರೈಂ ವರದಿಗಾರ ಆಗಿದ್ದೇನೆ. ಕ್ರೈಂ ವರದಿಗಾರಿಕೆ ನನಗೆ ಹೊಸತೇನಲ್ಲ. ನಾನು ಕಾರ್ಕಳದಲ್ಲಿ, ಉಡುಪಿಯಲ್ಲಿ ವರದಿಗಾರ ಆಗಿ ಕೆಲಸ ಮಾಡುವಾಗ ಅನುಭವ ಆಗಿತ್ತು. ಆದರೆ ಇಲ್ಲಿ ಅನುಭವ ಎಂದರೆ ೫ ಜನ ವರದಿಗಾರಾರ ಜೊತೆ ಕೆಲಸ ಮಾಡುವುದು
ಈ ಹಿಂದೆ ಅಪರಾಧ ವರದಿಗಾರಿಕೆಯ ಸಾಮ್ರಾಜ್ಯ ಸ್ಥಾಪಿಸಿದ್ದ ವಿನಾಯಕ ಭಟ್ಟರು ಅಧಿ ಪಥ್ಯ ಸ್ಥಾಪಿಸಿದ್ದರು. ಈಗ ಅದನ್ನು ಉಳ್ಹಿಸಿಕೊಳ್ಳುವ ಸಧ್ಯ ಆದರೆ ಬೆಳೆಸಿಕೊಳ್ಳುವ ಜವಬ್ದಾರಿ ನನಗಿದೆ ! ಆದರೆ ಸಾಮ್ರಾಜ್ಯ ತಮ್ಮ ಕೈವಶಕ್ಕೆ ಉಳ್ಹಿದವರು ಕಾಯುತಿದ್ದಾರೆ ! ನಾನು ಸ್ಟೋರಿ ಮಾಡುವ ಮುಂಚೆ ಬೇರೊಬ್ಬ ಮಾಡಿ ಆಗುತ್ತವೆ ! ಬರುವ ಆರಂಭದಲ್ಲಿ ಕ್ರೈಂ ಬಗ್ಗೆ ನನಗೆ ವೀಕ್ನೆಸ್ಸ್ ಇರುವುದರಿಂದ ಇದೆ ಸಮಯಕ್ಕೆ ಆಕ್ರಮಣ ಮಾಡಿ ಕೋಟೆ ವಿಸ್ತಾರ ಮಾಡಿದರೆ !
ಹೀಗಾಗಿ ಕ್ರೈಂ ವರದಿ ಅಂದರೆ ಅದೇನೋ ಕೆಲವರಿಗೆ ಆಕರ್ಷಣೆ ತಮ್ಮ ಕೆಲಸ ಸಸುತ್ರ ಮಾಡದಿದ್ದರೂ ಕ್ರೈಂ ಸ್ಟೋರಿ ಮಾಡುವ ಚಪಲ. ನನ್ನನ್ನು ಸಹಿತ ಎಲ್ಲ ವರದಿಗಾರ್ರಿಗೂ ಇದು ಅನ್ವಯಿಸುತ್ತದೆ ! !
2008-08-03
ಏಕೆ ಗಲಭೆ, ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ
ಏಕೆ ಗಲಭೆ
ಸುರತ್ಕಲ್ ಗಲಭೆ ನೋಡಿ ಕಲಿಯ ಬಾರದೆ ಸ್ನೇಹಿತರೇ ... 1998 ಡಿಸೆಂಬರ್ 30 rimda ಸುರತ್ಕಲ್ ಗಲಭೆ ಆರಂಭ ವಾದರೆ ಹತ್ತು ದಿನ ನಡೆಯಿತು. ಇದರಲ್ಲಿ ೯ ಜನ ಸತ್ತು ೧೨೮ ಮಂದಿ ಗಾಯಗೊಂಡರು
ಇಬ್ಬರು ಗಲಭೆಕೋರರು ಸತ್ತದ್ದು ಬಿಟ್ಟರೆ ಅಮಾಯಕರನ್ನು ಮನೆಗೆ ನುಗ್ಗಿ ಕತ್ತಿಯಿಂದ ಕಡಿದು ಕಗ್ಗೊಲೆ ಮಾಡಲಾಯಿತು ಸಿಕ್ಕ ಸಿಕ್ಕವರಿಗೆ ಚೂರಿ ಇರಿಯಲಾಯಿತು ಮನೆ ಅಂಗಡಿಗೆ ನುಗ್ಗಿ ಕೊಳ್ಳೆ ಹೊಡೆಯಲಾಯಿತು ಪಾಪ ಸತ್ತದ್ದು ಮುಗ್ಧರು !7 ಮಂದಿ ಮುಸ್ಲಿಮರು ಇಬ್ಬರು ಹಿಂದೂಗಳು ಸಾವನ್ನಪ್ಪಿದರು.
ಇದಾಗಿ ೧೦ ವರ್ಷ ಕಳೆದಿದೆ ಎಲ್ಲ ಆರೋಪಿಗಳು ಬಿಡುಗಡೆ ಗೊಂಡಿದ್ದಾರೆ ! ಪೆಟ್ಟು ತಿಂದವರು ಮತ್ತೆ ಮೇಲೆ ಏಳಲು ಕಷ್ಟವಾಯಿತು ಲೂಟಿ ಮಾಡಿದವರು ಖುಷಿಯಲ್ಲಿ ಬದುಕು ತಿದ್ದಾರೆ !
ಹಾಗಾದರೆ ನಮ್ಮವರು ಎಷ್ಟು ಹೋದರು ಅವರದು ಎಷ್ಟು ಹೋಯಿತು ಎಂಬ ಕ್ರಿಕೆಟ್ ಸುದ್ದಿಯನ್ತೆ ಕೇಳುವ ಹವ್ಯಾಸ ಬೇಡ. ಹೊರಗಡೆಯಿಂದ ಬರುವ ಮುಸ್ಲಿಂ ಮತ್ತು ಹಿಂದೂ ಗುಂಡಾ ಗಳಿಗೆ ಲಾಭ ! ಪರ ವೂರಿನ ರೌಡಿಗಳು ಬಂದು ಸ್ಥಳಿಯರನ್ನು ಲೂಟಿ ಮಾಡುತ್ತಾರೆ ಅಸ್ತೆ ! ಬೇಕ್ಎ ಯಿಂಥಹ ಮೂಢ , ಕುರುಡು ಧರ್ಮ ಪ್ರೇಮ !
ನೆನಪಿಡಿ ಇದು ಭಾರತ
ಈ ಗಲಭೆಗಳು ಕೆಲವು ರಾಷ್ಟ್ರ ಬಳಿಕ ಮೊದಲು ಧರ್ಮ ಎಂದು ಹೇಳುವ ಅನ್ಯ ದೇಶ ಪ್ರೇಮಿಗಳಿಗೆ ತಕ್ಕ ಪಾಠ ಹುಡುಗಿಯರನ್ನು ಹೊತ್ತೊಯ್ಯುವ ಹಲ್ಕಾ ಮಕ್ಕಳಿಗೆ ಹೆದರಿಕೆ ಉಂಟು ಮಾಡಿದೆ ! ! ಒಳ್ಳೆ ರೀತಿಯಲ್ಲಿ ಬದುಕಿದರೆ ಬದುಕಿ ಇಲ್ಲವಾದರೆ ಅನುಭವಿಸಿ ಎಂಬ ಸಂದೇಶ ರವಾನೆಯಾಗಿದೆ