2011-06-07

ರಾಜಧಾನಿಯಲ್ಲಿ "ರಾಜಗೌರವ"

Mangalore: Vijaya Karnataka Journalist Jitendra K Bags Charaka Award Mangalore: Vijaya Karnataka Journalist Jitendra K Bags Charaka Award Daijiworld Media Network – Mangalore (RD/VA) Mangalore, Jun 27: Jitendra Kundeshwar, chief correspondent at the city bureau of Karnataka’s leading Kannada daily ‘Vijay Karnataka,’ (VK) has bagged the prestigious Charaka Progressive Journalism Award. Shangondas Gupta, executive director of Communication for Development and Learning (CDL) announced the winners of Charaka Progressive Journalism Award for the year 2009 and 2010. Kundeshwar also bagged the Vaddarse Award – 2003 for his humanity focused Kannada article – No one concerned over tribal issues, Pa Go Rural Report Award for his article – Sustenance of tribal in the forest of Someshwar near Hebri. He is a BA and LLB graduate from Vaikunta Baliga Law College, Udupi and also possesses degree in Sanskrit literature from Sanskrit College, Udupi. He is the son of Ganga R Bhat and late Raghavendra Bhat of Kundeshwar, near Karkala. The award will be presented to Kundeshwar at Raj Bhavan on Thursday July 1 by Governor Hansraj Bharadwaj. The award comprised of Charaka trophy and a cash prize of Rs 10,000. Radhakrishna Badthi, sub-editor of Vijay Karnataka has won a special award for the year 2010 under water conservation journalism.

ಪೊಲೀಸ್-ಪತ್ರಕರ್ತ-ಜನ ಸಂಪರ್ಕ

Udayavani | Aug 04, 2010 ಕಾರ್ಕಳ, ಆ. 4: ಕಾನೂನಿಗೆ ತಲೆಬಾಗಿ ನಡೆಯುವವರ ಪರವಾಗಿ ಪೊಲೀಸ್ ಇಲಾಖೆಯು ಯಾವಾಗಲೂ ಸೌಮ್ಯಧೋರಣೆ ತಳೆದರೆ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೆಗೊಳ್ಳುತ್ತದೆ. ಅಂತೆಯೇ ಕಳವು ಮಾಲುಗಳನ್ನು ಖರೀದಿಸುವವರ ವಿರುದ್ಧ ಉಗ್ರ ಕ್ರಮ ಕೆಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ಅವರು ಹೇಳಿದರು. ಕಾರ್ಕಳ ರೋಟರಾಯಕ್ಟ್ ಕ್ಲಬ್ ವತಿಯಿಂದ ಆ. 3 ರಂದು ನಿಟ್ಟೆ ಗ್ರಾಮ ಬೋರ್ಗಲ್­ಗ­ುಡ್ಡೆಯ ಅಶ್ವತ್ಥಕಟ್ಟೆಯಲ್ಲಿ ಜರಗಿದ ಪೊಲೀಸ್ ಇಲಾಖೆಗೆ ಅಭಿನಂದನಾ ಸಮಾರಂಭ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಪ್ರೀತಿ, ವಿತ್ವಾಸ, ನಂಬಿಕೆ ಇದ್ದರೆ ಯಾವುದೇ ಪ್ರಕರಣವನ್ನು ಬೇಧಸಲು ಸಾಧ್ಯ. ಈ ಸಂದರ್ಭದಲ್ಲಿ ಇಲಾಖೆಯು ಒತ್ತಡಕ್ಕೆ ಒಳಗಾಗುತ್ತದೆ. ಪ್ರಕರಣ ಬೇಧಸುವಲ್ಲಿ ತಡವಾದರೆ ಟೀಕೆಗಳು ಸಾಮಾನ್ಯ. ಶೀಘ್ರವಾಗಿ ಕೆಲಸ ಮಾಡಲು ಹೋದಾಗ ಸಾರ್ವಜನಿಕರಿಗೆ ಕೆಲವೊಂದು ತೊಂದರೆಯಾಗುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಸಹಕಾರ, ಹೊಂದಾಣಿಕೆ ಅಗತ್ಯ. ಇದರಿಂದ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಿಂದೆ ತನಿಖೆಯ ನೆಪದಲ್ಲಿ ಹಲವಾರು ಖರ್ಚುಗಳು ಬರುತ್ತಿದ್ದಾಗ ಇಲಾಖೆಯವರು ಅದಕ್ಕಾಗಿ ವಾಮಮಾರ್ಗದಲ್ಲಿ ಹೋಗುತ್ತಿದ್ದರು. ಆದರೆ ಈಗ ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ಸರಕಾರವು ತನಿಖೆಗೆ ಸಂಬಂಧಪಡುವ ಎಲ್ಲಾ ಖರ್ಚುಗಳನ್ನು ಭರಿಸುವ ಅಧ ಕಾರವನ್ನು ಎಸ್ಪಿ ಅವರಿಗೆ ನೀಡಿರುವುದರಿಂದ ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಪಶ್ಚಿಮ ವಲಯದಲ್ಲಿ ಕಡಿಮೆ ಅಪರಾಧ ನಡೆಯುವ ಜಿಲ್ಲೆ ಉಡುಪಿಯಾಗಿದ್ದು, ಅದರಲ್ಲೂ ಕಾರ್ಕಳದಲ್ಲಿ ಬಹಳಷ್ಟು ಅಪರಾಧಗಳು ಕಡಿಮೆಯಾಗಿವೆ. ಕಾರ್ಕಳ ಪೊಲೀಸರು ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬೋರ್ಗಲ್ ಗುಡ್ಡೆ ಶಕು ಬಾ ಅವರ ಕೊಲೆ ಪ್ರಕರಣವನ್ನು ಬೇಧಸಿದ ಸಂಬಂಧಪಟ್ಟ ಅಧ ಕಾರಿ ಹಾಗೂ ಸಿಂಬಂದಿಗಳಿಗೆ ಇಲಾಖೆಯ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು. ಮತ್ತು ತನ್ನ ವೆಯುಕ್ತಿಕ ಕೊಡುಗೆಯಾಗಿ ರೂ. 10,000 ವನ್ನು ನೀಡುತ್ತೇನೆ ಎಂದು ಅವರು ಹೇಳಿದರು. ಗ್ರಾಮಾಂತರ ಠಾಣೆಯ ಸಬ್ಇನ್­ಸ್ಟೆಕ್ಟರ್ ಸಂದೇಶ್ ಪಿ. ಜಿ. ಅವರು ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ತನ್ನ ಅನುಭವವನ್ನು ವ್ಯಕ್ತಪಡಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ್, ರೋಟರಾಯಕ್ಟ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಅಭಿನಂದನ್ ಶೆಟ್ಟಿ, ವರುಣ್ ಅಸೋಸಿಯೇಟ್ಸ್ನ ಪಾಲುದಾರ ಆರ್. ವಿವೇಕಾನಂದ ಶೆಣೆ, ಡಿವೆಎಸ್ಪಿ ಸಂತೋಷ್ ಕುಮಾರ್, ನಿವೃತ್ತ ಮಿಲಿಟರಿ ಅಧ ಕಾರಿ ಶಂಕರ್ ಶೆಟ್ಟಿ, ಅಶ್ವತ್ಥ ಕಟ್ಟೆ ಸಮಿತಿಯ ಅಧ್ಯಕ್ಷ ವೃಷಭ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಕಳ ರೋಟರಾಯಕ್ಟ್ ಅಧ್ಯಕ್ಷ ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ವಲಯ ಪ್ರತಿನಿಧ ಶೆಲೇಂದ್ರ ರಾಎ್ ಸ್ವಾಗತಿಸಿ, ಇಕಾºಲ್ ಅಹ್ಮದ್ ವಂದಿಸಿದರು. ಈ ಸಂದರ್ಭದಲ್ಲಿ ಬೋರ್ಗಲ್ ಗುಡ್ಡೆ ಶಕು ಬಾ ಕೊಲೆ ಪ್ರಕರಣವನ್ನು ಬೇಧಸಿದ ಕಾರ್ಕಳ ಪೊಲೀಸ್ ಉಪ ಅದೀಕ್ಷಕ ಸಂತೋಷ್ ಕುಮಾರ್, ವೃತ್ತ ನಿರೀಕ್ಷಕ ಪುಟ್ಟಸ್ವಾಮೀ ಗೌಡ, ಗ್ರಾಮಾಂತರ ಉಪ ನಿರೀಕ್ಷಕ ಸಂದೇಶ್ ಪಿ. ಜಿ, ಸಿಬಂದಿಗಳಾದ ಉದಯ ಕುಮಾರ್, ಮೂರ್ತಿ ಮತ್ತು ಸತೀಶ್ ಪಳ್ಳಿ ಅವರನ್ನು ಸಮ್ಮಾನಿಸಲಾಯಿತು. ಹೊಸೂರು ಹೇಳಿದ್ದು *ಕಳೆದ ಒಂದು ವರ್ಷದಲ್ಲಿ ಭೂಗತ ಚಟುವಟಿಕೆಯಲ್ಲಿ ನಿರತರಾದ 165 ವ್ಯಕ್ತಿಗಳ ಬಂಧನ, 45 ಪಿಸ್ತೂಲ್­ಗ­ಳ ವಶ, ಮತೀಯ ಗಲಭೆಗೆ ಪ್ರಚೋದನೆ ನೀಡುವವರನ್ನು ಬಂಧಸಿ ಕ್ರಮ ಕೆಗೊಂಡಿರುವುದರಿಂದ ಕಳೆದ 7 ತಿಂಗಳುಗಳಿಂದ ಯಾವುದೇ ಸಮಾಜ ಘಾತುಕ ಚಟುವಟಿಕೆಗಳು ನಡೆಯಲಿಲ್ಲ. *ನಕ್ಸಲ್ ಚಟುವಟಿಕೆಯನ್ನು ವೇಗವಾಗಿ ಹತ್ತಿಕ್ಕಲಾಗುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದೇ ವೇಗದಲ್ಲಿ ಮುನ್ನಡೆದರೆ ಒಂದು ವರ್ಷದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣ ಸಾಧ್ಯ. * 85 ಶೇ. ಕ್ಕಿಂತಲೂ ಹೆಚ್ಚಿರುವ ಕಾನ್­ಸ್ಟೆàಬಲ್­ಗ­ಳೇ ಪೊಲೀಸ್ ಇಲಾಖೆಯ ಬೆನ್ನೆಲುಬು. ಅಧ ಕಾರಿಗಳು ಅವರನ್ನು ಉತ್ತಮ ರೀತಿಯಲ್ಲಿ ನೋಡಿದರೆ ಇಲಾಖೆ ಯಶಸ್ಸು ಗಳಿಸಲು ಸಾಧ್ಯ. *ಶಕು ಬಾ ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ರಿಂದ ಸಾರ್ವಜನಿಕರಿಗಾದ ತೊಂದರೆಗೆ ತಾನು ವೆಯುಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. *ಈ ಕಾರ್ಯಕ್ರಮದಲ್ಲಿ ಜನಸಂಪರ್ಕ ಸಭೆಯ ನೆಪದಲ್ಲಿ ಪೊಲೀಸರ ವಿರುದ್ಧ ಟೀಕೆ ಬಂದರೂ ಇದೇ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿರುವುದು ಶ್ಲಾಘನೀಯವಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ.

ರಾಜ "ಗೌರವ

ಮಂಗಳೂರು, ಜುಲೈ 08: ಕಮ್ಯೂನಿ ಕೇಶನ್ ಫಾರ್ ಡೆವಲಪ್ ಮೆಂಟ್ ಎಂಡ್ ಲರ್ನಿಂಗ್ ಸಂಸ್ಥೆ ಕಳೆದ ಗುರುವಾರ ಬೆಂಗಳೂರು ರಾಜ ಭವನದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಪತ್ರಿ ಕೋದ್ಯಮ ಪ್ರೋತ್ಸಾಹಕ ಪ್ರಶಸ್ಥಿ ಮತ್ತು ಅಭಿವೃದ್ಧಿ ಪತ್ರಿ ಕೋದ್ಯಮ ವಾರ್ಷಿಕ ಪ್ರದಾನ ಸಮಾರಂಭದಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ ಅವರು ಗೌರವ್ವನಿತ ರಾಜ್ಯಪಾಲ ಎಚ್.ಆರ್.ಭಾರ ದ್ವಾಜ್ ಅವರಿಂದ 'ಮಕ್ಕಳ ಹಕ್ಕುಗಳ ಪತ್ರಿ ಕೋದ್ಯಮ' ಪ್ರಶಸ್ತಿ ಸ್ವೀಕರಿಸಿದರು. http://www.gulfkannadiga.com/news-27223.html

ಹಳೇ ಮಂಗಳೂರು

angalorehistory.blogspot.com ವಿಶಾಲವಾದ ಕರಾವಳಿ ಪ್ರದೇಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಶತಮಾನಗಳ ಇತಿಹಾಸವಿದೆ.ಇದಕ್ಕೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಟ್ಟಡವೇ ಸಾಕ್ಷಿ.ಕೆ0ಪು ಮುರ ಕಲ್ಲಿನಿಂದ ಕಟ್ಟಿದ ಈ ಭವ್ಯವಾದ ಕಟ್ಟಡದ ನೋಟವೇ ಚೆಂದ.ಪ್ರಸ್ತುತ ಇದನ್ನು ಪುರತತ್ವ ಇಲಾಖೆಗೆ ಒಪ್ಪಿಸುವ ಕಾರ್ಯ ಆರಂಭಗೊಂಡಿದೆ.ಪೋರ್ಚುಗೀಸರು,ಮ್ಯಸೂರು ಹುಲಿ ಟಿಪ್ಪು ಸುಲ್ತಾನ್, ವಿಜಯ ನಗರದ ಅರಸರ ಆಳ್ವಿಕೆ ನಂತರ ಬ್ರಿಟಿಷರು ಇಲ್ಲಿಂದಲೇ ಆಡಳಿತ ನದೆಸಿದ್ದರು.1914 ರಿಂದ 1919 ರ ವರೆಗೆ ನಡೆದ ಒಂದನೇ ಮಹಾ ಯುದ್ದದಲ್ಲಿ ಇದೇ ಹಳ್ಳಿಯಿಂದ 88 ಮಂದಿ ಪಾಲ್ಗೊಂಡಿದ್ದು ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಅವರ ಗೌರವಾರ್ಥ ಬರೆದ ಲೇಖನ ಇ0ದಿಗೂ ಈ ಕಟ್ಟಡದ ಗೋಡೆಯ ಮೇಲೆ ಕಾಣಬಹುದು.ಇದುವರೆಗೆ 120 ಜಿಲ್ಲಾಧಿಕಾರಿಗಳನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1799 ರಲ್ಲಿ ಬ್ರಿಟೀಷ್ ಅಧಿಕಾರಿ ಮೇಜರ್ ಮುನ್ರೋ ಅವರು ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.1905 ರಲ್ಲಿ AHS ಬಹದ್ದೂರ್ ಅವರು ಅಧಿಕಾರ ವಹಿಸಿದ ಮೊದಲನೇ ಭಾರತೀಯ ಜಿಲ್ಲಾಧಿಕಾರಿಯಾಗಿದ್ದಾರೆ.M.ಸುಬ್ರಹ್ಮಣ್ಯ ಅವರು 1940 ರಲ್ಲಿ ಜಿಲ್ಲಾಧಿಕಾ

ರಾಧಿಕಾ ನಾಗ ಕನ್ನಿಕಾ !

ನಾಗಪ್ಪನಿಗೆ ಉದ್ದುದ್ದ ನಮಸ್ಕಾರ ಹಾಕಲು ಊರಿಗಿಳಿದ ರಾಧಿಕಾ, ಆಗಾಗ ಕೆಮ್ಮುತ್ತಿದ್ದರು. ಕೇಳಬಾರದ್ದನ್ನು ತವರಿನ ಪತ್ರಕರ್ತರು ಎಲ್ಲಿ ಕೇಳಿಬಿಡುವರೋ ಎಂಬ ದಿಗಿಲಲ್ಲಿದ್ದರು. ಸುತ್ತಲೂ ಮುತ್ತಿಕೊಂಡ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ರಾಧಿಕಾ ಈ ಬಾರಿ ಹುಷಾರಿಲ್ಲ, ಮುಂದಿನ ಬಾರಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಟ್ರೈ ಮಾಡ್ತೇನೆ ಎಂದು ಪತ್ರಕರ್ತರಿಗೆ ಆಶ್ವಾಸನೆ ನೀಡಿದರು. ಈ ಮಧ್ಯೆಯೂ ಅವರು ಮಾತನಾಡಿದ್ದು ಇಲ್ಲಿದೆ.. ಹೀಗಿದೆ.. ಜಿತೇಂದ್ರ ಕುಂದೇಶ್ವರ Radhika will be producing her first movie with Ganesh! ಮಂಗಳೂರಿನ ಚಿತ್ರ ನಟಿಯರಿಗೆಲ್ಲ ಈ ನಾಗ ದೇವರು ಅಂದ್ರೆ ಭಾರಿ ಭಕ್ತಿ! ಬಿಗ್ ಬ್ರದರ್ಸ್ ಶೋನಿಂದ ವಿಶ್ವವಿಖ್ಯಾತಿಯಾದ ಶಿಲ್ಪಾ ಶೆಟ್ಟಿ ತನ್ನ ತಂಗಿ ಶಮಿತಾ ಜತೆ ಊರಿಗೆ ಬಂದು ನಾಗಪೂಜೆ ಮಾಡಿದ್ದರು. ಬಾಲಿವುಡ್ ತಾರೆ ಐಶ್ವರ್ಯ ರೈ ಈ ಹಿಂದೆ ಹುಟ್ಟೂರಿಗೆ ಬಂದು ನಾಗಪೂಜೆ, ಕೋಲ ಮಾಡಿಸಿದ್ದರು. ಈಗ ಮಂಗಳೂರಿನ ಬೆಡಗಿ ರಾಧಿಕಾ ಸರದಿ. ನಾಗರಪಂಚಮಿಯಂದು ತವರಿಗೆ ಬಂದ ತಂಗಿ, ಬೆಳಗ್ಗೆ ತನ್ನ ಕುಳಾಯಿ ಕೂಚಿಮನೆ ಸಾಲ್ಯಾನ್ ಮೂಲಸ್ಥಾನಕ್ಕೆ ಬಂದು ನಾಗನಿಗೆ ಹಾಲೆರೆದರು. ಇದು ಸತತ ಮೂರನೇ ವರ್ಷದ ಹ್ಯಾಟ್ರಿಕ್ ಪೂಜೆ. ತನ್ನ ಸುತ್ತ ಹಾವಿನಂತೆ ಸುತ್ತುತ್ತಿರುವ ವಿವಾದ ದೂರವಾಗಲಿ, ಮಾಡುತ್ತಿರುವ ಹೊಸ ಚಿತ್ರ ಯಶಸ್ವಿಯಾಗಲಿ ಎಂದು ನಾಗದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರಂತೆ ! ಮಗಳಿಗೆ ಶೀತ ಮತ್ತು ಕೆಮ್ಮು ಬಾಧೆ ಇದೆ. ಪತ್ರಕರ್ತರ ಜತೆ ಮಾತನಾಡುವುದು ಸ್ವಲ್ಪ ಕಷ್ಟ ಎಂದು ತಂದೆ ದೇವರಾಜ ಶೆಟ್ಟರು ಹೇಳಿದರು. ಪಾಪ ರಾಧಿಕಾ ಆರೋಗ್ಯ ಇತ್ತೀಚೆಗೆ ಸರಿ ಇಲ್ಲ. ಮೊನ್ನೆ ಇನ್‌ಕಮ್ ಟ್ಯಾಕ್ಸ್ ರೈಡ್ ಆಗಿ ಗೋಣಿ ಚೀಲದಲ್ಲಿ ಹಣ ಕೊಂಡು ಹೋದಮೇಲೆ ಆರೋಗ್ಯ ಸ್ವಲ್ಪ ಹದಗೆಟ್ಟಿದೆ ! ಆದರೆ ಹೊಸ ಚಿತ್ರಕ್ಕೇನು ಹಣದ ಕೊರತೆ ಇಲ್ಲವಂತೆ.