2011-06-07

ರಾಧಿಕಾ ನಾಗ ಕನ್ನಿಕಾ !

ನಾಗಪ್ಪನಿಗೆ ಉದ್ದುದ್ದ ನಮಸ್ಕಾರ ಹಾಕಲು ಊರಿಗಿಳಿದ ರಾಧಿಕಾ, ಆಗಾಗ ಕೆಮ್ಮುತ್ತಿದ್ದರು. ಕೇಳಬಾರದ್ದನ್ನು ತವರಿನ ಪತ್ರಕರ್ತರು ಎಲ್ಲಿ ಕೇಳಿಬಿಡುವರೋ ಎಂಬ ದಿಗಿಲಲ್ಲಿದ್ದರು. ಸುತ್ತಲೂ ಮುತ್ತಿಕೊಂಡ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ರಾಧಿಕಾ ಈ ಬಾರಿ ಹುಷಾರಿಲ್ಲ, ಮುಂದಿನ ಬಾರಿ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಟ್ರೈ ಮಾಡ್ತೇನೆ ಎಂದು ಪತ್ರಕರ್ತರಿಗೆ ಆಶ್ವಾಸನೆ ನೀಡಿದರು. ಈ ಮಧ್ಯೆಯೂ ಅವರು ಮಾತನಾಡಿದ್ದು ಇಲ್ಲಿದೆ.. ಹೀಗಿದೆ.. ಜಿತೇಂದ್ರ ಕುಂದೇಶ್ವರ Radhika will be producing her first movie with Ganesh! ಮಂಗಳೂರಿನ ಚಿತ್ರ ನಟಿಯರಿಗೆಲ್ಲ ಈ ನಾಗ ದೇವರು ಅಂದ್ರೆ ಭಾರಿ ಭಕ್ತಿ! ಬಿಗ್ ಬ್ರದರ್ಸ್ ಶೋನಿಂದ ವಿಶ್ವವಿಖ್ಯಾತಿಯಾದ ಶಿಲ್ಪಾ ಶೆಟ್ಟಿ ತನ್ನ ತಂಗಿ ಶಮಿತಾ ಜತೆ ಊರಿಗೆ ಬಂದು ನಾಗಪೂಜೆ ಮಾಡಿದ್ದರು. ಬಾಲಿವುಡ್ ತಾರೆ ಐಶ್ವರ್ಯ ರೈ ಈ ಹಿಂದೆ ಹುಟ್ಟೂರಿಗೆ ಬಂದು ನಾಗಪೂಜೆ, ಕೋಲ ಮಾಡಿಸಿದ್ದರು. ಈಗ ಮಂಗಳೂರಿನ ಬೆಡಗಿ ರಾಧಿಕಾ ಸರದಿ. ನಾಗರಪಂಚಮಿಯಂದು ತವರಿಗೆ ಬಂದ ತಂಗಿ, ಬೆಳಗ್ಗೆ ತನ್ನ ಕುಳಾಯಿ ಕೂಚಿಮನೆ ಸಾಲ್ಯಾನ್ ಮೂಲಸ್ಥಾನಕ್ಕೆ ಬಂದು ನಾಗನಿಗೆ ಹಾಲೆರೆದರು. ಇದು ಸತತ ಮೂರನೇ ವರ್ಷದ ಹ್ಯಾಟ್ರಿಕ್ ಪೂಜೆ. ತನ್ನ ಸುತ್ತ ಹಾವಿನಂತೆ ಸುತ್ತುತ್ತಿರುವ ವಿವಾದ ದೂರವಾಗಲಿ, ಮಾಡುತ್ತಿರುವ ಹೊಸ ಚಿತ್ರ ಯಶಸ್ವಿಯಾಗಲಿ ಎಂದು ನಾಗದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರಂತೆ ! ಮಗಳಿಗೆ ಶೀತ ಮತ್ತು ಕೆಮ್ಮು ಬಾಧೆ ಇದೆ. ಪತ್ರಕರ್ತರ ಜತೆ ಮಾತನಾಡುವುದು ಸ್ವಲ್ಪ ಕಷ್ಟ ಎಂದು ತಂದೆ ದೇವರಾಜ ಶೆಟ್ಟರು ಹೇಳಿದರು. ಪಾಪ ರಾಧಿಕಾ ಆರೋಗ್ಯ ಇತ್ತೀಚೆಗೆ ಸರಿ ಇಲ್ಲ. ಮೊನ್ನೆ ಇನ್‌ಕಮ್ ಟ್ಯಾಕ್ಸ್ ರೈಡ್ ಆಗಿ ಗೋಣಿ ಚೀಲದಲ್ಲಿ ಹಣ ಕೊಂಡು ಹೋದಮೇಲೆ ಆರೋಗ್ಯ ಸ್ವಲ್ಪ ಹದಗೆಟ್ಟಿದೆ ! ಆದರೆ ಹೊಸ ಚಿತ್ರಕ್ಕೇನು ಹಣದ ಕೊರತೆ ಇಲ್ಲವಂತೆ.

ಕಾಮೆಂಟ್‌ಗಳಿಲ್ಲ: