- ಹಣ ಕಂಡರೆ, ಹೆಣ ಬಾಯಿಬಿಡುತ್ತದೆ।
ಪಿಚ್ನಲ್ಲಿ ಮಣ್ಣು ಇರುವದಲ್ಲಿ ನೋಟಿನ ಕಂತೆಗಳೇ ಇದೆ। ಆದರೆ ಇದು ಭಾರತೀಯ ಕ್ರಿಕೆಟ್ಗೆ ಹಿಡಿ ಮಣ್ಣು ಆಗದಿರಲಿ. ಕ್ರಿಕೆಟಿಗರು ದೇಶಕ್ಕೆ ಆಡುತ್ತಿಲ್ಲ. ತಮ್ಮ ಸ್ಥಾನ ಭದ್ರತೆಗೆ ಮತ್ತು ಹಣ ಥೈಲಿಗಾಗಿ. ಕೋಟಿಗಟ್ಟಲೆ ಬರುವ ಹಣಕ್ಕಾಗಿ. ಎಂಡೋಸಿಂಗ್ ಜಾಹೀರಾತು ಅಂದರೆ ಎಷ್ಟು ಹೊತ್ತು ಮೈದಾನದಲ್ಲಿ ಆಟಗಾರ ಇರುತ್ತಾನೊ ಅವನಿಗೆ ಅಷ್ಟು ಹೊತ್ತು ಹೆಚ್ಚು ಹಣ ನೀಡುತ್ತವೆ. ಟಿವಿಗಳಲ್ಲಿ ತೋರಿಸುವ ಜಾಹೀರಾತಿನ ಸಮಯದಂತೆ. ಈ ಹಣ ಸೌರವ್ ಗಂಗೂಲಿ ಮಾತ್ರವಲ್ಲ ಎಲ್ಲ ಕ್ರಿಕೆಟಿಗರಿಗೂ ಸಿಗುತ್ತದೆ ಎಂಬುದನ್ನು ಆಯ್ಕೆಗಾರರೇ ಬಾಯಿ ಬಿಟ್ಟಿದ್ದಾರೆ. ಬಾಂಗ್ಲಾ ಎದುರು ಗಂಗೂಲಿ ಆಡಿದ ನಿಧಾನಗತಿ ಆಟಕ್ಕೆ ಇದೇ ಕಾರಣ ಎಂಬುದನ್ನೂ ಆಯ್ಕೆಗಾರರು ಒಪ್ಪುತ್ತಾರೆ. ಹಾಗಾದರೆ ಕ್ರಿಕೆಟ್ ಎಲ್ಲಕ್ಕಿಂತ ಮೇಲು ಎನ್ನುತ್ತಿದ್ದ ಇವರು ಇದೀಗ ಹಣವೇ ಎಲ್ಲಕ್ಕಿಂತ ಮೇಲು ಅನ್ನತೊಡಗಿದ್ದಾರೆ. ಲಡೇಂಗೆ ಜೀತೇಂಗೆ ಎನ್ನುತ್ತಿದ್ದ ಕ್ರಿಕೆಟಿಗರು ತಮ್ಮೊಳಗೆ ಹೊಡೆದಾಡಿಕೊಂಡು ಭಾರತದ ಅಸಂಖ್ಯ ಕೋಟಿ ಅಭಿಮಾನಿಗಳ ಹೃದಯವನ್ನು ಒಡೆದು ಬಿಟ್ಟರೇ ಛೆ. ಯುವರಾಜ್ ಸಿಂಗ್ಗೆ ರಾತ್ರಿ ಮಜಾ ಪಾರ್ಟಿಗಳಿಂದಲೇ ಉಪನಾಯಕ ಹುದ್ದೆ ನೀಡಿಲ್ಲ ಎನ್ನುತ್ತಾರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಆಯ್ಕೆಗಾರ ಭೂಪಿಂದರ್ ಸಿಂಗ್. ಕಿಮ್ ಶರ್ಮ ಜತೆ ಮಜಾ ಉಡಾಯಿಸುತ್ತಿದ್ದ ಯುವರಾಜ್ ಕ್ರಿಕೆಟ್ನಲ್ಲಿ ಹೊಡೆಬಡಿಯ ದಾಂಡಿಗನೋ ಹಾಗೆಯೇ ಜೀವನದಲ್ಲೂ ಕೂಡಾ. ಫೋಟೊ ಗ್ರಾಫರ್ ಜತೆ, ಮನೆಗೆ ಬಂದ ಅತಿಥಿಗಳ ಜತೆ ಜಗಳವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗಳೂ ಇವೆ. ಇದೇ ಪಾರ್ಟಿ ವಿಷಯದಲ್ಲಿ ಈತನಿಗೆ ಕೋರ್ಟ್ನಲ್ಲಿ ಜಾಮೀನು ಸಿಕ್ಕಿದೆ ಕೂಡ. ಜಹೀರ್ ಖಾನ್, ಪಠಾಣ್ ಅವರ ಪ್ರೇಮ ಪ್ರಕರಣಗಳು ತೀರಾ ಇತ್ತೀಚಿನ ಧೋನಿ- ಹಸೀನ್ ಚುಂಬನ ಪ್ರಕರಣಗಳಿಂದ ಕ್ರಿಕೆಟ್ ತಾರೆಯರಿಗೆ ಸಿಗುವ ಅಭಿಮಾನದ ಆಳ ಅರ್ಥವಾಗುತ್ತದೆ ಹೀಗಿರುವಾಗ ಅವರು ದಾರಿ ತಪ್ಪುವುದರಲ್ಲಿ ಸಂಶಯವಿಲ್ಲ. ಇವರು ಹೊರಗಡೆ ಏನೇ ಮಾಡಲಿ ತಂಡ ಗೆದ್ದರೆ ಏನೂ ಹೇಳುವುದಿಲ್ಲ. ಆಯೆ ಆಣುಮಗೆ ಮಲ್ತೆ’ ಎನ್ನುತ್ತಾರೆ ಆದರೆ ಆಡದೆ ಉಳಿದು ರಾಜಕೀಯ ಮಾಡಿದರೆ ಮಾತ್ರ ಯಾರೂ ಕ್ಷಮಿಸುವುದಿಲ್ಲ ಅಷ್ಟೆ. ಭಾರತ ಕ್ರಿಕೆಟ್ ಆಟಗಾರರನ್ನು ಆಯ್ಕೆಮಾಡುವ ಮಹನೀಯರು ಹೇಳಿದ್ದೇನು ಗೊತ್ತೆ. ಮೊದಲನೇಯದಾಗ ಭೂಪಿಂದರ್ ಸಿಂಗ್ ಸೀನಿಯರ್-ದ್ರಾವಿಡ್ಗೆ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಸಹಕಾರ ನೀಡುತ್ತಿರಲೇ ಇಲ್ಲ. ಗುಪುಗಾರಿಕೆ ಇತ್ತು. ಸೆಹವಾಗ್, ಸಚಿನ್, ಹರ್ಭಜನ್ ಜತೆ ದಿನಗಟ್ಟಲೆ ಮಾತನಾಡುತ್ತಿರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಹೀಗೆ ಹೇಳ್ತಾರೆ. ಚಾಪೆಲ್ಗೆ ಅಹಂಕಾರ ಹೆಚ್ಚು ಎಲ್ಲರೂ ತಾನು ಹೇಳಿದ್ದು ಕೇಳಬೇಕು ಎಂಬ ಗರ್ವ ಮನೆ ಮಾಡಿತ್ತು. ಸ್ನೇಹಿತರಂತೆ ವರ್ತಿಸಬೇಕಿದ್ದ ಗುರು ಚಾಪೆಲ್ ಶಾಲೆ ಮೇಷ್ಟ್ರಂತೆ ಬೆತ್ತ ಹಿಡಿದು ಮಕ್ಕಳಿಗೆ ದಂಡಿಸಿ ಪಾಠ ಮಾಡುವಂತೆ ಕಾಣುತ್ತಿದ್ದರು. ಜಾಹೀರಾತು ಕಂಪನಿಗಳು ಪ್ರಭಾವ ಬೀರುತ್ತಿವೆ. ಹಾಗಾಗಿ ಬಿಸಿಸಿಐ ಜಾಹೀರಾತು ಕಂಪನಿಗಳ ಒತ್ತಡಕ್ಕೆ ಮಣಿಯಬೇಕಾಗಿದೆ. ಆದ್ದರಿಂದಲೇ ಇಂಥ ಅವಸ್ಥೆ. ಕ್ರಿಕೆಟ್ ಆಡಬೇಕು ನೋಡಲು ಆಕರ್ಷಕವಾಗಿರಬೇಕು ಅಂಥವರನ್ನೇ ಈ ಕಂಪನಿಗಳು ಹುಡುಕಿ ಜಾಹೀರಾತು ನಿಡುತ್ತವೆ. ಇದರಿಂದ ಕ್ರಿಕೆಟಿಗರು ದೇಶಕ್ಕಾಗಿ ಆಡುವ ಬದಲು ಸ್ವಂತಕ್ಕಾಗಿ ಆಡುವ ಸಾದ್ಯತೆ ಇದೆ ಎನ್ನವು ಕಳವಳ ಭೂಪಿಂದರ್ ಸಿಂಗ್ ವ್ಯಕ್ತಪಡಿಸಿದರೆ, ಅರುಣ್ ಲಾಲ್ ನಿಲುವೇ ಬೇರೆ. ಜಾಹೀರಾತು ಎನ್ನುವುದು ಪ್ರೋತ್ಸಾಹಕರ ಧನ. ಒಳ್ಳೆ ಆಡಿದರೆ ಜಾಹೀರಾತು ಸಿಗುತ್ತದೆ. ನಿಧಾನವಾಗಿ ಆಡುತ್ತಾನೆ ಎಂದಾದರೆ ಅಂಥ ಆಟಗಾರರನ್ನು ಹೊರಗಟ್ಟುವ ಕೆಲಸ ಆಯ್ಕೆಗಾರರು ಮಾಡಬೇಕಾಗುತ್ತದೆ ಅದು ಬಿಟ್ಟು ಜಾಹೀರಾತು ಕೆಟ್ಟದು ಎನ್ನುವುದು ಹಾಸ್ಯಾಸ್ಪದ ಎನ್ನುತ್ತಾರೆ ಅರುಣ್ ಲಾಲ್. ತಂಡದ ಮ್ಯಾನೇಜರ್ ಸಂಜಯ್ ಜಗದಾಲೆ ಹೇಳುವ ಪ್ರಕಾರ ತಂಡದ ಕ್ರಿಕೆಟಿಗರಲ್ಲಿ ಒಬ್ಬರಿಗೊಬ್ಬರು ಕೂಡಿ ಬರುತ್ತಿರಲಿಲ್ಲ. ತಂಡದಲ್ಲಿ ಆಯ್ಕೆಯಾಗಿದ್ದರೂ ವಿಶ್ವಕಪ್ನ ಒಂದೂ ಪಂದ್ಯದಲ್ಲಿ ಆಡಿರದಿದ್ದ ಶ್ರೀಶಾಂತ್ ಮತ್ತು ಜಹೀರ್ ಖಾನ್ ನಡುವೆ ಡ್ರೆಸಿಂಗ್ ರೂಮ್ನಲ್ಲಿ ಹೊಡೆದಾಟವೇ ಸಂಭವಿಸಿತ್ತಿತ್ತಂತೆ. ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಕತೆ ಎಲ್ಲರಿಗೂ ಗೊತ್ತಿದೆ ಆದರೆ ಸೋತಾಗ ಮಾತ್ರ ಎಲ್ಲರೂ ಬೆರಳು ತೋರಿಸುತ್ತಾರೆ. ಗೆದ್ದಾಗ ಎಲ್ಲವೂ ಮರೆಯಾಗುತ್ತದೆ. ತಪ್ಪುಗಳಿವೆ ಸಹಜ ಆದರೆ ಅದನ್ನು ಸರಿಪಡಿಸುವತ್ತ ಗಮನಹರಿಸಬೇಕಾಗಿದೆ. ಬಿಸಿಸಿಐ ವಿಶ್ವದಲ್ಲಿಯೇ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರಬಹುದು. ಆದರೆ ಕ್ರಿಕೆಟ್ನಲ್ಲೂ ಇದರ ಆಸಕ್ತಿ ಪೂರ್ಣ ತೋರಿಸದ ಕಾರಣ ಭಾರತೀಯ ಕ್ರಿಕೆಟ್ ವಿಶ್ವದಲ್ಲಿ ನಂ.೧ ಆಗಲಿಲ್ಲ ಎನ್ನುತ್ತಾರೆ ಕಪಿಲ್ ದೇವ್. ಮ್ಯಾಚ್ ಫಿಕ್ಸಿಂಗ್ ಆಟವನ್ನು ಕೊಲೆ ಮಾಡಿದರೆ ಈ ಜಾಹೀರಾತು ಎಂಬದು ನಿಧಾನ ವಿಷದಂತೆ ಕ್ರಿಕೆಟ್ ಎಂಬ ದೇಹದ ಮೇಲೆ ಪಸರಿಸುತ್ತಿದೆ. ಇದರಿಂದ ಪಾರು ಮಾಡುವವರು ಯಾರು ?
2 ಕಾಮೆಂಟ್ಗಳು:
yenu vichitra Font yide
ನಿಮಗೆ ಕ್ರಿಕೆಟ್ ಡ್ರೆಸ್ ಜೆನ್ನಾಗಿ ಕಾಣಿಸುತ್ತೆ:)
ಅಂದ ಹಾಗೆ ಹೇಗಿದೆ ವಿಜಯ ಕರ್ನಾಟಕ ಮಂಗಳೂರು ವಿಭಾಗ:)
ನಿಮ್ಮ ಆಫೀಸಿನ ಎಲ್ಲರಿಗೂ ನನ್ನ ಹಾರೈಕೆಗಳನ್ನು ತಿಳಿಸಿ
ಕಾಮೆಂಟ್ ಪೋಸ್ಟ್ ಮಾಡಿ