2011-07-31

ಗಂಗಾವತಿ ಅನುಭವವೂ ಧರ್ಮಜನ ನರಕದರ್ಶನವೂ

ಮಹಾಭಾರತದಲ್ಲಿ ಧರ್ಮರಾಯ ನರಕದರ್ಶನ ಕತೆ ನಿಮಗೆ ಗೊತ್ತಿರಬಹುದು, ಯಾವುದೇ ತಪ್ಪು ಮಾಡದಿದ್ದ ಸತ್ಯಸಂಧ ಧರ್ಮರಾಯ ನರಕಕ್ಕೆ ಹೋದದ್ದು ಹೇಗೆ ? ಪ್ರಶ್ನೆ ಮೂಡುತ್ತದೆ. ಮಹಾಭಾರತ ಅಂತ್ಯದಲ್ಲಿ ಪಾಂಡವರು ದ್ರೌಪದಿ ಸಹಿತಿ ಸಜೀವವಾಗಿ ಸ್ವರ್ಗಕ್ಕೆ ಹೋಗಲು ತೀರ್ಮಾನಿಸುತ್ತಾರೆ. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ದ್ರೌಪದಿ ಸತ್ತುಬೀಳುತ್ತಾಳೆ. ಆಗ ಭೀಮ ಕೇಳುತ್ತಾನೆ, ಅಣ್ಣಾ ದ್ರೌಪದಿ ಬಿದ್ದಳು ಎನ್ನುತ್ತಾನೆ. ಆಗ ಧರ್ಮರಾಯ ಹೇಳುತ್ತಾನೆ, ಆಕೆ ಐದು ಗಂಡಂದಿರನ್ನು ಸಮಾನವಾಗಿ ನೋಡದೆ ನಿನ್ನ ಮೇಲೆ ಅತಿ ಪ್ರೀತಿ ಇಟ್ಟುಕೊಂಡಿದ್ದಳು ಹೀಗಾಗಿ ಸಜೀವ ಸ್ವರ್ಗ ಸಿಕ್ಕಿಲ್ಲ, ಎನ್ನುತ್ತಾನೆ, ನಕುಲ ಸಹದೇವರೂ ಬೀಳುತ್ತಾರೆ ಆಗ ಭೀಮ ಕೇಳುವಾಗ ಅವರಿಬ್ಬರಿಗೆ ತಮ್ಮ ಸೌಂದರ್ಯದ ಮೇಲೆ ಅಹಂಕಾರ ಇತ್ತು ಹೀಗಾಗಿ ಸತ್ತರು ಎನ್ನುತ್ತಾನೆ, ಅರ್ಜುನ ಬೀಳುವಾಗ "ಆತನಿಗೆ ಮೂರುಲೋಕದ ಶೂರ' ಎಂಬ ಅಹಂಕಾರ ಇತ್ತು ಎನ್ನುತ್ತಾನೆ, ಭೀಮ ನಾನು ಬೀಳುತ್ತಿದ್ದೇನೆ ಎನ್ನುವಾಗ ನೀನು ಸಹೋದರನ ವಿರುದ್ಧ ಧನಿ ಎತ್ತುತ್ತಿದ್ದೆ ಎಂದು ಧರ್ಮರಾಯ ನುಡಿಯುತ್ತಾನೆ. ಇವರ ಜತೆ ನಾಯಿ ಯೂ ಒಟ್ಟಿಗೆ ಸ್ವರ್ಗದತ್ತ ಬರುತ್ತಿತ್ತು. ದಾರಿ ಮುಗಿಯಿತು, ಬಾಗಿಲು ತೆರೆದರೆ ಅಲ್ಲಿ ಎಣ್ಣೆ ಕೊಪ್ಪರಿಗೆಯಲ್ಲಿ ಜನರನ್ನು ಕಾಯಿಸುತ್ತಿದ್ದಾರೆ, ಅಂದರೆ ನರಕ, ಸಹೋದರರೂ ಅಲ್ಲಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸ್ವರ್ಗಕ್ಕೆ ಧರ್ಮಜನನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಕೌರವ, ದುಃಶ್ಯಾಸನ ಎಲ್ಲರೂ ರಂಭೆ, ಉರ್ವಶಿ ಜತೆ ಮಜಾ ಮಾಡುತ್ತಿರುತ್ತಾರೆ. ಆಗ ಧರ್ಮಜ ಮಮ್ಮಲ ಮರುಗುತ್ತಾನೆ. ಜತೆಗೆ ಇದ್ದ ನಾಯಿ ರೂಪದಲ್ಲಿ ಬಂದ ಯಮ ಸಂತೈಸುತ್ತಾನೆ, ಕೌರವರು ಯುದಧದಲ್ಲಿ ಮಡಿದು ವೀರ ಸ್ವರ್ಗ ಪಡೆದರು. ಸಹೋದರರೂ ಸ್ವಲ್ಪ ಹೊತ್ತಿನ್ಲಿ ಸ್ವರ್ಗ ಸೇರಲಿ್ಲದ್ದಾರೆ. ನಿನಗೆ ನರಕ ದರ್ಶನ ಮಾಡಿದ್ದು ಏಕೆಂದರೆ ನೀನು ತಪ್ಪು ಮಾಡಿರುವೆ. ಕುರುಕ್ಷೇತ್ರ ಯುದ್ಧದಲ್ಲಿ ಸುಳ್ಳು ಹೇಳಿದ್ದೆ. ಗುರು ದ್ರೋಣರು ತನ್ನ ಮಗ ಯುದ್ಧದಲ್ಲಿ ಸತ್ತೆ ಶಸ್ತ್ರ ತ್ಯಾಗ ಮಾಡುತ್ತಾರೆ ಎಂಬುದು ಗೊತ್ತಿದ್ದು ನೀನು ಯುದ್ಧದಲ್ಲಿ ಅಶ್ವತ್ಥಾಮ ಹತಃ ಕುಂಜರಃ ಎಂದು ಹೇಳಿದೆ. ನಿಮ್ಮದೇ ಪಾಳಯದಲ್ಲಿ ಅಶ್ವತ್ಥಾಮ ಎಂಬ ಆನೆಯನ್ನು ಕೊಂದು "ಆಶ್ವತ್ಥಾಮ ಆನೆ ಸತ್ತ ಎಂದು ಹೇಳಿದೆ. ಆನೆ ಎಂಬುದನ್ನು ಮಾತ್ರ ಯಾರಿಗೂ ಕೇಳದಂತೆ ಮೆಲ್ಲಗೆ ಹೇಳಿದೆ. ನೀನು ಸತ್ಯಸಂಧ ಎಂದು ತಿಳಿದು ದ್ರೋಣ ಶಸ್ತ್ರ ಸಂನ್ಯಾಸ ಮಾಡಿದ. ದುಷ್ಟಧ್ಯುಮ್ನ ದ್ರೋಣರನ್ನು ಕಡಿದು ಕೊಂದ. ನೀನು ಸತ್ಯವನ್ನೇ ಹೇಳಿದರೂ ಮೋಸ ಮಾಡಿದ್ದೀಯ ಅದಕ್ಕೆ ನರಕದರ್ಶನ ಮಾಡಿದೆ ಎಂದರು. ನಾನು ಈ ಕತೆಯನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನನಗೆ ಗಂಗಾವತಿ ಎಂಬ ಕಚೇರಿ ದರ್ಶನ ಮಾಡಿದ್ದೆ. ಅಲ್ಲಿನ ಚಿತ್ರಗುಪ್ತ, ಯಮಕಿಂಕರರನ್ನು ಕಂಡು ಎರಡು ತುಲನೆ ಮಾಡಲು ಮನಸ್ಸಾಯಿತು. ಕಚೇರಿಯಲ್ಲಿ ಬಹುತೇಕ ಸಹೋದ್ಯೋಗಿಗಳು (ಶೇ.90) ಒಳ್ಳೆಯವರು ಒಂದಿಬ್ಬರು ಕೆಟ್ಟವರಿರಬಬಹುದು. ಡ್ರೈವರೇ ಸರಿ ಇಲ್ಲದಿದ್ದರೇ ಅಪಘಾತ ಗ್ಯಾರಂಟಿ. ಹೀಗಾಗಿ ಅಲ್ಲಿ ಕಚೇರಿಯಲ್ಲಿ ಅನುಭವ ಕೆಟ್ಟದೇ ಆಗಿದ್ದರೂ ವೃತ್ತಿ ಜೀವನದಲ್ಲಿ ಮಾತ್ರ ಅಪೂರ್ವ ಅನುಭವ ಆಗಿ ದಾಖಲಾಗಿರುವುದು ಮಾತ್ರ ನನ್ನ ಸುದೈವವೇ ಸರಿ. ಹೊಸ ಲೋಕ ಕಂಡಂತಾಯಿತು, ಗಂಗಾವತಿಯು ಮುಗ್ಧ, ಒರಟು ಮನಸ್ಸಿನ ಜನರನ್ನು ಅವರ ಮಾತು, ಸಹಕಾರವನ್ನು ನಾನೆಂದಿಗೂ ಮರೆಯಲಾರೆ.

ಕಾಮೆಂಟ್‌ಗಳಿಲ್ಲ: