2011-08-06

ಗಂಗಾವತಿ ಎಂಬ ಜೈಲು, ಆರೋಪಿಯೇ ವಾರ್ಡನ್

ಗಂಗಾವತಿಯ ಆನುಭವ ಬರೆದಷ್ಟು ಮುಗಿಯದು. ಅದೊಂದು ಕಚೇರಿ ಎಂದು ಸಹೋದ್ಯೋಗಿಗಳು ಎಂದೂ ಭಾವಿಸಿರಲಿಲ್ಲ. ವಿಕೆಯಲ್ಲಿ ಕೆಟ್ಟ ಬಾಸ್ ಬಗ್ಗೆ ಬರೆದ ಲವಲವಿಕೆ ಲೇಖನದ ಶೇ.90 ನಮ್ಮ ಕಚೇರಿಗೆ ಸಂಬಂಧಿಸಿದ್ದು ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಆದರೂ ಬಾಸ್ ಬಗ್ಗೆ ವಿಪರೀತ ಹೆದರಿಕೆ. ಕೂಲಿ ಕಾರ್ಮಿಕರಿಗೆ ಕೂಡಾ ಮರ್ಯಾದೆ ನೀಡುತ್ತಾರೆ. ಆದರೆ ಬಾಸ್ ಎಂಬ ವ್ಯಕ್ತಿ ಬಹುತೇಕ ಸಿಬ್ಬಂದಿಯನ್ನು ಕೀಳಾಗಿ ನೋಡುತ್ತಿದ್ದರು. ನನ್ನನ್ನು ಮಾತಿನಲ್ಲಿ ಕೀಳಾಗಿ ನೋಡದಿದ್ದರೂ ಕೊಟ್ಟ ಕೆಲಸ ಮಾತ್ರ ಟೆಕ್ನಿಕಲ್. ನನ್ನ ಹುದ್ದೆ ಪ್ರಧಾನ ವರದಿಗಾರ ಅಥವಾ ಅದಕ್ಕೆ ಸಮವಾದ ಮುಖ್ಯ ಉಪಸಂಪಾದಕ. ಆದರೆ ಮೊದಲ ಒಂದುವರೆ ತಿಂಗಳು ಫೈಲ್ ಗಳನ್ನು ಡೌನ್ ಲೋಡ್ ಮಾಡುವ ಕೆಲಸ ನೀಡಿದ. ಇದನ್ನು ಎಚ್ ಆರ್ ವಿಭಾಗಕ್ಕೆ ತಿಳಿಸಿದರೂ ಆಯಿತು ಗಮನಕ್ಕೆ ತರುತ್ತೇವೆ ಎಂದು ಹೇಳಿ ಸುಮ್ಮನಾದರು. 15 ದಿನ ಪೇಜ್ ಕಟ್ಟುವ ಕೆಲಸ ನೀಡಿದರು. ಉತ್ತಮ ಹೆಡ್ಡಿಂಗ್, ಪೇಜ್ ಲೇಔಟ್, ಎಡಿಟಿಂಗ್ ನಿಂದ ಗಮನ ಸೆಳೆದೆ. ಇದನ್ನು ಬ್ಯೂರೋ ಚೀಫ್ ಎಂಬಾತ ನನ್ನ ಬಳಿ ಹೊಗಳಿಯೂ ಇದ್ದ. ಆದರೆ ಇತ್ತ ಮಂಗಳೂರಿನ ಬಾಲ್ಡಿ ಕುಮಾರನಾಥ ಮನೆ ಹಾಳನ ಜತೆ ನಿರಂತರ ಅಕ್ರಮ ಸಂಪರ್ಕ ಬೆಳೆಸಿ ನನ್ನ ಬಗ್ಗೆ ಏನೆಲ್ಲಾ ಹೇಳಿ ಕಿವಿ ಊದಿದ. ಮತ್ತೆ ನನಗೆ ಸಿಕ್ಕಿದ್ದು ಅದೇ ಡೌನ್ ಲೋಡ್ ಕೆಲಸ. ಆದರೆ ಕಂಪನಿ ಕೊಟ್ಟ ಕೆಲಸ ಎಂದು ನಿಷ್ಠೆಯಿಂದ ಮಾಡಿದೆ. ಫೈಲ್ ಡೌನ್ ಲೋಡ್ ನಲ್ಲಿ ನನ್ನಷ್ಟು ವೇಗವಾಗಿ, ಶಿಸ್ತುಬದ್ಧವಾಗಿ ಗಂಗಾವತಿ ಬ್ಯೂರೋದಲ್ಲಿ ಇನ್ಯಾರೂ ಇಲ್ಲ ಎಂದೇ ನನ್ನ ಭಾವನೆ. ನಾನು ರಜೆ ಹೋದಾಗ ಡೌನ್ ಲೋಡ್ ಗೆ ರವೀಂದ್ರ ಜಲರಡ್ಡಿ ಎಂಬ ಹಿರಿಯ ಉಪಸಂಪಾದಕರನ್ನು ಕುಳಿತುಕೊಳ್ಳಿಸಿ, ವಿಕೃತ ಆನಂದ ಪಡೆಯುತ್ತಿದ್ದ. ಜೂನಿಯರ್ ಉಪಸಂಪಾದಕರಿಗೆ ಮುಖ್ಯ ಉಪಸಂಪಾದಕರ ಗ್ರೇಡ್ ನೀಡುತ್ತಿದ್ದ. ಕಂಪನಿ ಪ್ರಮೋಟ್ ಮಾಡಿದವರಿಗೆ ಡಿಮೋಶನ್, ಈತನ ಬಕಿಟ್ ಹಿಡಿದವರಿಗೆ, ಒಂದಷ್ಟು ಕೊಟ್ಟವರಿಗೆ ನಿಯಮ ಬಾಹಿರವಾಗಿ ಪ್ರಮೋಶನ್ ನೀಡುತ್ತಿದ್ದ, ಕಚೇರಿಗೆ ಬಂದರೆ ಕೇವಲ ಮೊಬೈಲ್ ನಲ್ಲಿ ತನ್ನ ಕಚೇರಿ ಬಗ್ಗೆ ತನಗೆ ಬೇಕಾದವರ ಬಗ್ಗೆ, ತನಗೆ ಬೇಕಾದ ಸುದ್ದಿಗಳ ಬಗ್ಗೆ ಲಾಬಿ ಮಾಡುವುದೇ ಕೆಲಸ. ಹೀಗಾಗಿ ಉಳಿದವರು ದೂರು ತೆಗೆದುಕೊಂಡು ಹೋದರೆ ಅವರನ್ನೇ ಕೆಲಸದಿಂದ ಔಟ್ ಮಾಡುತ್ತಿದ್ದ. ಗಂಗಾವತಿ ಕಚೇರಿಯಲ್ಲಿ 8 ಮಂದಿ ಕೆಲಸ ಕಳೆದುಕೊಂಡಿರುವುದು, 4 ಮಂದಿ ವರ್ಗಾವಣೆ ಆಗಿರುವುದು ಜ್ವಲಂತ ಉದಾಹರಣೆ. ವಿಸಿ ಹೀರೇಮಠ್, ವೀರೇಂದ್ರ ಪಾಟಿಲ್ ಬಳೀಕ ಜಲರಡ್ಡಿ ಲೇಟೆಸ್ಟ್ ಉದಾಹರಣೆ. ಈಗ ಶೇ.90 ಮಂದಿ ವರ್ಗಾವಣೆಗೆ ಕಾದಿದ್ದಾರೆ. ಏಕೆಂದರೆ ಅದೊಂದು ಜೈಲ್, ಅದರಿಂದ ಬಿಡುಗಡೆ ಬೇಕು ಎಂದರು. ಧೈರ್ಯವಾಗಿ ಯಾರು ಹೇಳುವುದಿಲ್ಲ. ಏಕೆಂದರೆ ಅಲ್ಲಿದ್ದು ಎಲ್ಲರೂ ಹೇಡಿಗಳೇ ಆಗಿ ಬದಲಾಗಿದ್ದಾರೆ. ಇನ್ನೂ ಇದೆ.. ನಿರೀಕ್ಷಿಸಿ..

ಕಾಮೆಂಟ್‌ಗಳಿಲ್ಲ: