2008-08-12

ಎಲ್ಲ ಲೈವ್ ಶೋ ಹೀಗೆ ..ಪೂರ್ವ ನಿರ್ಧರಿತ . ನನ್ನದು ಕೂಡ

ಎಲ್ಲ ಟಿವಿ ಚಾನೆಲ್ ಗಳಲ್ಲಿ ಲೈವ್ ಶೋ ಪ್ರಸಾರ ಆಗುತ್ತಿರುತ್ತದೆ. ನಾನು ವೀಕ್ಷಕ ಆಗಿ ನೋಡುತ್ತಿದ್ದೆ. ಆದರೆ ನಮ್ಮ ಟಿವಿ ಶೋ ದ "ರೀ ಒಂದ್ನಿಮಿಷ" ಕಾರ್ಯಕ್ರಮದಲ್ಲಿ ನಾನು ಒಬ್ಬ ಪಾರ್ಟಿಸಿಪೆಟ್ ಆಗಿದ್ದೆ. ಆಗ ನನಗೆ ಲೈವ್ ಶೋ ಹೇಗೆ ಇರುತ್ತವೆ ಎಂಬ ಅನುಭವ ಆಯಿತು. ನಾನು ಮತ್ತು ನಮ್ಮ ಸ್ಥಾನೀಯ ಸಂಪಾದಕ ಕುಮಾರನಾಥ್ ವಿಜಯ ಕರ್ನಾಟಕ ಪ್ರತಿನಿಧಿಸಿದರೆ ಪ್ರಾಜವನಿಯ ಬಾಲಕೃಷ್ಣ ಪುತ್ತಿಗೆ ಮಾತು ಮುರಳಿಧರ, ಜಯಕಿರಣ ದ ಇಬ್ಬರು ಸ್ನೇಹಿತರು ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಅಚ್ಚ ಗನ್ನಡದಲ್ಲಿ ಮಾತನಾಡುವುದು. ಕುಮಾರ್ ನಾಥ್ ಅವರು ಒಂದು ಇಂಗ್ಲಿಷ್ ಪದ ಹೇಳಿದರೆ, ಪ್ರಜಾವಾಣಿ ಅವರು ಒಂದು ಇಂಗ್ಲಿಷ್ ಪದ ಹೇಳಿ ಮಾರ್ಕ್ ಕಳೆದುಕೊಂಡೆವು. ಜಯಕಿರಣದ ಸ್ನೇಹಿತರು ಪೂರ್ಣ ಅಂಕ ಪಡೆದುಕೊಂಡರು. ಎರಡನೆ ಹಂತದಲ್ಲಿ ಸುಳ್ಳು ಹೇಳುವುದು. ಇದನ್ನು ನಾನು ಸಮರ್ಥವಾಗಿ ನಿಭಾಯಿಸಿದೆ. ಇದಕ್ಕೆ ಕುಮಾರನಾಥ್ ಒಳ್ಳೆ ಸಹಕಾರನೀಡಿದರು.ಈ ವಿಭಾಗ ದಲ್ಲಿ ನಾವು ಗೆದ್ದು ಮೇಲುಗೈ ಸಾಧಿಸಿದೆವು. ಪ್ರಜಾವಾಣಿ ಅವರು ಪೂರ್ಣ ಹಿಂದೆ ಬಿದ್ದಿದ್ದರು. ಆದರೂ ಜಯಕಿರನದವರು ನಮ್ಮ ಜತೆಯಲ್ಲಿ ಅಂಕ ಹಂಚಿಕೊಂಡಿದ್ದರು. ಮೂರನೇ ಸುತ್ತಿನಲ್ಲಿ ಹೌದು ಮತ್ತು ಇಲ್ಲ ಬಳಸದೆ ಉತ್ತರ ನೀಡುವ ಸ್ಪರ್ಧೆ. ಇದರಲ್ಲಿ ಪ್ರಜಾವಾಣಿ ಸ್ನೇಹಿತರು ನೆಲ ಕಚ್ಚಿದ್ದರು. ಜಯಕಿರಣದ ಸ್ನೇಹಿತರು ಉಲ್ಟಾ ಉತ್ತರ ನೀಡಿ ಮತ್ತೆ ಮುಂದೆ ಹೋದರು. ನಾವು ಒಂದು ಬಾರಿ ಮಾತ್ರ ತಪ್ಪಿ ಬಿದ್ದೆವು. ಆದರು ಜಯಕಿರಣದವರು ನಮಗಿಂತ ಮುಂದೆ ಹೋಗಿ ಆಗಿತ್ತು. ಆದರೆ ಕೊನೆ ಸ್ಥಾನ ನಮಗೆ ಇಲ್ಲ ಎಂಬುದು ಗ್ಯಾರಂಟಿ ಆಗಿತ್ತು. ಏಕೆಂದರೆ ಪ್ರಾಜವಾಣಿ ಯವರು ಒಂದು ಸುತ್ತಿನಲ್ಲಿ ಗೆಲ್ಲದೆ ಅಂಕ ಪಾತಾಳದಲ್ಲಿತ್ತು. ಕೊನೆಯ ಸುತ್ತು ಟಂಗ್ ಟ್ವಿಸ್ಟ್. ಇದರಲ್ಲಿ ನಾನು ಉತ್ತಮವಾಗಿ ಹೇಳಿ (ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ ) ಸ್ಪರ್ಧೆಯಲ್ಲಿ ಕಾವು ಮೂಡಿಸಿದೆ. ಪ್ರಜಾವಾಣಿಯ ಸ್ನೇಹಿತರು ಅಂಕದಲ್ಲಿ ಹಿಂದೆ ಬಿದ್ದಿದ್ದರು. ಆವರು ಪ್ರಬಲ ಮಾಧ್ಯಮ. ಸೋತು ಹೋದರೆ ನಾಳೆ ಪತ್ರಿಕೆಯಲ್ಲಿ ಕಾರ್ಯಕ್ರಮ ಸಂಘಟಕರಿಗೆ ಪ್ರಚಾರ ಉಲ್ಟಾ ಆಗುವ ಸಾಧ್ಯತೆ ಇತ್ತು ! ಹೀಗಾಗಿ ಅವರಿಗೆ ಸುಲಭದ ಕಪ್ಪು ಕುಂಕುಮ ಕೆಂಪು ಕುಂಕುಮ ಹೇಳುವಂತೆ ಎಂ ಸಿ ಸೂಚನೆ ನೀಡಿದ. ಅಂಕಗಳಿಂದ ಮುಂದೆ ಇದ್ದ ಜಯಕಿರಣದ ಸ್ನೇಹಿತರಿಗೆ ಕಷ್ಟದ ಟಂಗ್ ಟ್ವಿಸ್ಟ್ ರೋಡ್ ರೋಲರ್ ಅಪ್ಪರ್ ರೋಲರ್ ನೀಡಲಾಯಿತು. ಅವರು ಇದರಲ್ಲಿ ಸಂಪೂರ್ಣ ಸೋತು ಕನಿಸ್ಥ ಅಂಕ ಗಳಿಸಿದರು. ಸೊ ಅನಾಯಾಸವಾಗಿ ನಾವು ಜಯ ಗಳಿಸಿದೆವು. ಪ್ರಾಜವಾಣಿ ಸೆಕೆಂಡ್, ಜಯಕಿರನ್ ಥರ್ಡ್ ! ಎಲ್ಲ ಲೈವ್ ಶೋ ಹೀಗೆ ಇರಬಹುದಲ್ಲ ! ನಮ್ಮ ಪತ್ರಿಕೆ ನಂಬರ್ ಒನ್ , ನಾವು ಕೂಡ !

4 ಕಾಮೆಂಟ್‌ಗಳು:

KRISHNA ಹೇಳಿದರು...

ಕಂಗ್ರಾಚ್ಯುಲೇಶನ್ಸ್ ಗೆದ್ದಿದ್ದಕ್ಕೆ... ಈ ಚಿತ್ರದಲ್ಲಿ ನೀವು ಥೇಟ್ ಸುಧೀಂದ್ರ ಥರ ಕಾಣ್ತೀರಿ!

ಮಾಂಬಾಡಿ ಹೇಳಿದರು...

ಛೆ...ನಿಮ್ಮ ಮಂಡೆ ಅಂಟಿಸಿದಂತೆ ಕಾಣುವುದು ತಮಾಷೆ ಅಲ್ಲವಲ್ಲ.....?

ಜಿತೇಂದ್ರ ಕುಂದೇಶ್ವರ ಹೇಳಿದರು...

welcome k mohan, sudheendra kooda appana Zerox alva ?
..........
maambaadi nimma blog chennagide, puttq kavana beega artha aguttade
keep it up

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ಸುಳ್ಳು ಹೇಳುವುದನ್ನು ಸಮರ್ಥವಾಗಿ ನಿಭಾಯಿಸುತ್ತೀರಿ ಅಂದಿರಿ,..ಇನ್ನು ನಾವು ಮಾತಾಡುವಾಗ್ಲೂ ಎಚ್ಚರಿಕೆ ವಹಿಸಲೇಬೇಕು. ಯಾಕಂದ್ರೆ ಮೊದಲೇ ನೀವು 'ನಂಬರ್ ವನ್' ಅಲ್ವಾ?
-ಚಿತ್ರಾ