2011-06-07

ಪೊಲೀಸ್-ಪತ್ರಕರ್ತ-ಜನ ಸಂಪರ್ಕ

Udayavani | Aug 04, 2010 ಕಾರ್ಕಳ, ಆ. 4: ಕಾನೂನಿಗೆ ತಲೆಬಾಗಿ ನಡೆಯುವವರ ಪರವಾಗಿ ಪೊಲೀಸ್ ಇಲಾಖೆಯು ಯಾವಾಗಲೂ ಸೌಮ್ಯಧೋರಣೆ ತಳೆದರೆ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೆಗೊಳ್ಳುತ್ತದೆ. ಅಂತೆಯೇ ಕಳವು ಮಾಲುಗಳನ್ನು ಖರೀದಿಸುವವರ ವಿರುದ್ಧ ಉಗ್ರ ಕ್ರಮ ಕೆಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ಅವರು ಹೇಳಿದರು. ಕಾರ್ಕಳ ರೋಟರಾಯಕ್ಟ್ ಕ್ಲಬ್ ವತಿಯಿಂದ ಆ. 3 ರಂದು ನಿಟ್ಟೆ ಗ್ರಾಮ ಬೋರ್ಗಲ್­ಗ­ುಡ್ಡೆಯ ಅಶ್ವತ್ಥಕಟ್ಟೆಯಲ್ಲಿ ಜರಗಿದ ಪೊಲೀಸ್ ಇಲಾಖೆಗೆ ಅಭಿನಂದನಾ ಸಮಾರಂಭ ಹಾಗೂ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಪ್ರೀತಿ, ವಿತ್ವಾಸ, ನಂಬಿಕೆ ಇದ್ದರೆ ಯಾವುದೇ ಪ್ರಕರಣವನ್ನು ಬೇಧಸಲು ಸಾಧ್ಯ. ಈ ಸಂದರ್ಭದಲ್ಲಿ ಇಲಾಖೆಯು ಒತ್ತಡಕ್ಕೆ ಒಳಗಾಗುತ್ತದೆ. ಪ್ರಕರಣ ಬೇಧಸುವಲ್ಲಿ ತಡವಾದರೆ ಟೀಕೆಗಳು ಸಾಮಾನ್ಯ. ಶೀಘ್ರವಾಗಿ ಕೆಲಸ ಮಾಡಲು ಹೋದಾಗ ಸಾರ್ವಜನಿಕರಿಗೆ ಕೆಲವೊಂದು ತೊಂದರೆಯಾಗುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಸಹಕಾರ, ಹೊಂದಾಣಿಕೆ ಅಗತ್ಯ. ಇದರಿಂದ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಹಿಂದೆ ತನಿಖೆಯ ನೆಪದಲ್ಲಿ ಹಲವಾರು ಖರ್ಚುಗಳು ಬರುತ್ತಿದ್ದಾಗ ಇಲಾಖೆಯವರು ಅದಕ್ಕಾಗಿ ವಾಮಮಾರ್ಗದಲ್ಲಿ ಹೋಗುತ್ತಿದ್ದರು. ಆದರೆ ಈಗ ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ಸರಕಾರವು ತನಿಖೆಗೆ ಸಂಬಂಧಪಡುವ ಎಲ್ಲಾ ಖರ್ಚುಗಳನ್ನು ಭರಿಸುವ ಅಧ ಕಾರವನ್ನು ಎಸ್ಪಿ ಅವರಿಗೆ ನೀಡಿರುವುದರಿಂದ ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಪಶ್ಚಿಮ ವಲಯದಲ್ಲಿ ಕಡಿಮೆ ಅಪರಾಧ ನಡೆಯುವ ಜಿಲ್ಲೆ ಉಡುಪಿಯಾಗಿದ್ದು, ಅದರಲ್ಲೂ ಕಾರ್ಕಳದಲ್ಲಿ ಬಹಳಷ್ಟು ಅಪರಾಧಗಳು ಕಡಿಮೆಯಾಗಿವೆ. ಕಾರ್ಕಳ ಪೊಲೀಸರು ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬೋರ್ಗಲ್ ಗುಡ್ಡೆ ಶಕು ಬಾ ಅವರ ಕೊಲೆ ಪ್ರಕರಣವನ್ನು ಬೇಧಸಿದ ಸಂಬಂಧಪಟ್ಟ ಅಧ ಕಾರಿ ಹಾಗೂ ಸಿಂಬಂದಿಗಳಿಗೆ ಇಲಾಖೆಯ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು. ಮತ್ತು ತನ್ನ ವೆಯುಕ್ತಿಕ ಕೊಡುಗೆಯಾಗಿ ರೂ. 10,000 ವನ್ನು ನೀಡುತ್ತೇನೆ ಎಂದು ಅವರು ಹೇಳಿದರು. ಗ್ರಾಮಾಂತರ ಠಾಣೆಯ ಸಬ್ಇನ್­ಸ್ಟೆಕ್ಟರ್ ಸಂದೇಶ್ ಪಿ. ಜಿ. ಅವರು ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ತನ್ನ ಅನುಭವವನ್ನು ವ್ಯಕ್ತಪಡಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ್, ರೋಟರಾಯಕ್ಟ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಅಭಿನಂದನ್ ಶೆಟ್ಟಿ, ವರುಣ್ ಅಸೋಸಿಯೇಟ್ಸ್ನ ಪಾಲುದಾರ ಆರ್. ವಿವೇಕಾನಂದ ಶೆಣೆ, ಡಿವೆಎಸ್ಪಿ ಸಂತೋಷ್ ಕುಮಾರ್, ನಿವೃತ್ತ ಮಿಲಿಟರಿ ಅಧ ಕಾರಿ ಶಂಕರ್ ಶೆಟ್ಟಿ, ಅಶ್ವತ್ಥ ಕಟ್ಟೆ ಸಮಿತಿಯ ಅಧ್ಯಕ್ಷ ವೃಷಭ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಕಳ ರೋಟರಾಯಕ್ಟ್ ಅಧ್ಯಕ್ಷ ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ವಲಯ ಪ್ರತಿನಿಧ ಶೆಲೇಂದ್ರ ರಾಎ್ ಸ್ವಾಗತಿಸಿ, ಇಕಾºಲ್ ಅಹ್ಮದ್ ವಂದಿಸಿದರು. ಈ ಸಂದರ್ಭದಲ್ಲಿ ಬೋರ್ಗಲ್ ಗುಡ್ಡೆ ಶಕು ಬಾ ಕೊಲೆ ಪ್ರಕರಣವನ್ನು ಬೇಧಸಿದ ಕಾರ್ಕಳ ಪೊಲೀಸ್ ಉಪ ಅದೀಕ್ಷಕ ಸಂತೋಷ್ ಕುಮಾರ್, ವೃತ್ತ ನಿರೀಕ್ಷಕ ಪುಟ್ಟಸ್ವಾಮೀ ಗೌಡ, ಗ್ರಾಮಾಂತರ ಉಪ ನಿರೀಕ್ಷಕ ಸಂದೇಶ್ ಪಿ. ಜಿ, ಸಿಬಂದಿಗಳಾದ ಉದಯ ಕುಮಾರ್, ಮೂರ್ತಿ ಮತ್ತು ಸತೀಶ್ ಪಳ್ಳಿ ಅವರನ್ನು ಸಮ್ಮಾನಿಸಲಾಯಿತು. ಹೊಸೂರು ಹೇಳಿದ್ದು *ಕಳೆದ ಒಂದು ವರ್ಷದಲ್ಲಿ ಭೂಗತ ಚಟುವಟಿಕೆಯಲ್ಲಿ ನಿರತರಾದ 165 ವ್ಯಕ್ತಿಗಳ ಬಂಧನ, 45 ಪಿಸ್ತೂಲ್­ಗ­ಳ ವಶ, ಮತೀಯ ಗಲಭೆಗೆ ಪ್ರಚೋದನೆ ನೀಡುವವರನ್ನು ಬಂಧಸಿ ಕ್ರಮ ಕೆಗೊಂಡಿರುವುದರಿಂದ ಕಳೆದ 7 ತಿಂಗಳುಗಳಿಂದ ಯಾವುದೇ ಸಮಾಜ ಘಾತುಕ ಚಟುವಟಿಕೆಗಳು ನಡೆಯಲಿಲ್ಲ. *ನಕ್ಸಲ್ ಚಟುವಟಿಕೆಯನ್ನು ವೇಗವಾಗಿ ಹತ್ತಿಕ್ಕಲಾಗುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದೇ ವೇಗದಲ್ಲಿ ಮುನ್ನಡೆದರೆ ಒಂದು ವರ್ಷದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣ ಸಾಧ್ಯ. * 85 ಶೇ. ಕ್ಕಿಂತಲೂ ಹೆಚ್ಚಿರುವ ಕಾನ್­ಸ್ಟೆàಬಲ್­ಗ­ಳೇ ಪೊಲೀಸ್ ಇಲಾಖೆಯ ಬೆನ್ನೆಲುಬು. ಅಧ ಕಾರಿಗಳು ಅವರನ್ನು ಉತ್ತಮ ರೀತಿಯಲ್ಲಿ ನೋಡಿದರೆ ಇಲಾಖೆ ಯಶಸ್ಸು ಗಳಿಸಲು ಸಾಧ್ಯ. *ಶಕು ಬಾ ಕೊಲೆ ಪ್ರಕರಣ ಬೇಧಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ರಿಂದ ಸಾರ್ವಜನಿಕರಿಗಾದ ತೊಂದರೆಗೆ ತಾನು ವೆಯುಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. *ಈ ಕಾರ್ಯಕ್ರಮದಲ್ಲಿ ಜನಸಂಪರ್ಕ ಸಭೆಯ ನೆಪದಲ್ಲಿ ಪೊಲೀಸರ ವಿರುದ್ಧ ಟೀಕೆ ಬಂದರೂ ಇದೇ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿರುವುದು ಶ್ಲಾಘನೀಯವಾಗಿದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ.

ಕಾಮೆಂಟ್‌ಗಳಿಲ್ಲ: