2007-06-02
ಕೋರ್ಟ್‌ಗಳು ಸುದ್ದಿಯಾಗುವ ಮೇನಿಯಾ ಆರಂಭವಾಗಿದೆ। ಓಬಿಸಿ ಮೀಸಲು ನೀತಿ ಇರಬಹುದು, ಅಥವಾ ಶಿಲ್ಪಾ -ಗೇರ್ ಕಿಸ್ ಪ್ರಕರಣದಲ್ಲಿ ಬಂಧನ ವಾರಂಟ್ ಹೊರಡಿಸಿದ ಕ್ರಮ ಇರಬಹುದು. ಸಂಸದರ ಅಧಿಕಾರದ ಬಗ್ಗೆ ಕೋರ್ಟ್ ತಲೆ ಹಾಕಬಾರದು ಎಂಬರ್ಥದಲ್ಲಿ ಸ್ಪೀಕರ್ ಹೇಳುವ ಮೂಲಕ ಕೋರ್ಟ್‌ಗಳು ಮತ್ತೆ ವಿವಾದದ ಕಟಕಟೆಯಲ್ಲಿ ನಿಂತಿದೆ. ಓಬಿಸಿ ಮೀಸಲು ವಿಷಯದಲ್ಲಿ ಕೋರ್ಟ್ ಅತಿ ಉತ್ತಮ ಎನ್ನಬಹುದಾದ ಕ್ರಮ ಕೈಗೊಂಡಿವೆಯಾದರೂ ಕೆಲವೆಡೆ "ರಿಟ್ ಅರ್ಜಿ’ಯ ಪ್ರಚಾರದ ಮರ್ಜಿಗೆ ಸಿಲುಕುತ್ತಿರುವುದು ಮಾತ್ರ ವಿಷಾದನೀಯ.ಗೇರ್ ಶಿಲ್ಪಾಗೆ ಕಿಸ್ ಕೊಟ್ರೆ ಜೈಪುರಕ್ಕೇನು ಬಿಸಿಹಾಲಿವುಡ್ ನಟ ರಿಚರ್ಡ್ ಗೇರ್ ಏಡ್ಸ್ ಜಾಗೃತಿ ಕಾರ್‍ಯಕ್ರಮದಲ್ಲಿ ಶಿಲ್ಪಾಗೆ ಆಲಿಂಗನ, ಚುಂಬನದ ಕಿಸ್ ನೀಡಿದಾಗ ಮಾಧ್ಯಮಗಳು ಪದೇ ಪದೇ ತೋರಿಸಿ ಟಿಆರ್‌ಪಿ ರೇಟ್ ಏರಿಸಲು ನೋಡಿದವು. ಜನ ತಪ್ಪು, ತಪ್ಪು ಎಂದು ಪದೇ ಪದೇ ನೋಡಿ ಮನಸ್ಸಲ್ಲೆ ಮೆಲುವಾಗಿ ಮೆಲ್ಲಿದರು. ಮಾಧ್ಯಮದವರು ಪ್ರಚಾರ ನೀಡಿದ್ದು ತಪ್ಪು ಎಂದು ಹೇಳುತ್ತಾ ಈ ಬಗ್ಗೆ ಚರ್ಚಾ ಕಾರ್‍ಯಕ್ರಮ, ಸಂವಾದ ನಡೆಸಿದ ಕೆಲವರು ತಾವು ಚರ್ಚೆ ಮಾಡಿದ್ದುಮಾತ್ರ ಸರಿ ಎಂದು ಹೇಳಿಕೊಂಡರು ! ಇನ್ನು ಕೆಲವರು ಕಿಸ್ ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡರು. ಆದರೆ ಇದನ್ನು ಪ್ರಚಾರಕ್ಕೆ ಬಳಸಿಕೊಂಡದ್ದು ಜೈpuರ, ಇಂದೋರ್‌ನವರು. ಅಶ್ಲೀಲ ಕಿಸ್ ಇದು ಎಂದು ಸಾರ್ವಜನಿಕ ಹಿತಾಸಕ್ತಿ ಹೆಸರಲ್ಲಿ ಸ್ವ ಹಿತಾಸಕ್ತಿಯ ರಿಟ್ ಅರ್ಜಿ ದಾಖಲಿಸಿದರು. ಇಡೀ ಭಾರತದಲ್ಲಿ ಈ ಜೈpuರ, ಇಂಧೋರ್‌ನವರಿಗೆ ಮಾತ್ರ ಕಿಸ್ ಕೊಟ್ಟದ್ದಕ್ಕೆ ಏಕೆ ಇಷ್ಟು ತಲೆ ಬಿಸಿ ? ಈ ಬಗ್ಗೆ ಮತ್ತಷ್ಟು ಕೆದಕಿದರೆ ಇಲ್ಲಿನವರ ಪ್ರಚಾರ ತೆವಲು ಅಥವಾ ಮೂಲಭೂತವಾದಿ ಗುಣ ಎದ್ದು ತೋರುತ್ತಿದೆ. ಧೂಮ್ -೨ರಲ್ಲಿ ಐಶ್ವರ್‍ಯ ರೈ ಮತ್ತು ಹೃತಿಕ್ ರೋಶನ್ ಕಿಸ್ ಪ್ರಕರಣದ ಬಗ್ಗೆಯೂ ಇದೇ ಇಂದೋರ್‌ನಲ್ಲಿ ರಿಟ್ ಪ್ರಕರಣ ದಾಖಲಿಸಲಾಗಿತ್ತು. ಕ್ವಾಯಿಶ್‌ನ ಮಲ್ಲಿಕಾ ಶೆರಾವತ್ ೧೭ ಬಿಸಿ, ಬಿಸಿ ಕಿಸ್ ಕೂಡ ಇಲ್ಲಿ ಪ್ರಶ್ನಿಸಲಾಗಿತ್ತು. ಇವರಿಗೆ ಮಾತ್ರ ಭಾರತೀಯ ಸಂಸ್ಕೃತಿ ಗುತ್ತಿಗೆ ಕೊಟ್ಟಿದ್ದೆ ಎನ್ನುದಕ್ಕಿಂತ ಇವರಿಗೆ ಕೀಳು ಮಟ್ಟದ ಪ್ರಚಾರದ ಆಸೆ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅಂದರೆ ಗೇರ್ -ಶಿಲ್ಪಾಳಿಗೆ ಎಲ್ಲರ ಎದುರು ಅತಿರೇಕದ ಕಿಸ್ ನೀಡಿರುವುದು ಸರಿ ಎಂಬುದು ವಾದವಲ್ಲ. ಅದಕ್ಕಿಂತ ಹೆಚ್ಚಿನ ಅಸಂಸ್ಕೃತಿ ಬಗ್ಗೆ, ಜಾಗತೀಕರಣದ ಕೊಡುಗೆ ಈಗಿನ ಯುವಜನರ ವೀಕೆಂಡ್ ಪಾರ್ಟಿ, ಸೆಕ್ಸ್ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿರುವ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂಬುದೇ ಬೇಸರ. ಇನ್ನೊಂದೆಡೆ ಗೇರ್, ಶಿಲ್ಪಾ ಮತ್ತು ಏಡ್ಸ್ ಜಾಗೃತಿ ಕಾರ್‍ಯಕ್ರಮ ಸಂಘಟಕರು ಬಯಸಿದ್ದು ಇಂಥಹುದೇ ಪ್ರಚಾರದ ಆಸೆಯ ಹಿನ್ನೆಲೆಯಿಂದ ಎಂಬುದು ಗಮನಿಸಬೇಕು.ಆದರೆ ಇದನ್ನು ತಪ್ಪು, ತಪ್ಪು ಅಶ್ಲೀಲ ಎಂದು ಪ್ರತಿಭಟಿಸುವವರೆಲ್ಲಾ ಸಾಚಾಗಳೇ ಎಂದರೆ ಊಹ್ಙೂಂ ! ಪ್ರತಿಭಟನೆ ಸೊಲ್ಲೆತ್ತುವವರಲ್ಲಿ ಅ ನ್ಯರ ಸಂಗ ಮಾಡಿದವರು, ಬ್ಲೂ ಫಿಲ್ಮ್ ನೋಡಿದವರು ಅಥವಾ ಅನ್ಯರ ಸಂಗ ಮಾಡದಿದ್ದರೂ ಆಸೆ ಇದ್ದು ಅವಕಾಶ ಸಿಗದವರು ಇಲ್ಲವೇ ಇಲ್ಲ ಎಂದರೆ ಅದು ಸಂpooರ್ಣ ತಪ್ಪಾದೀತು. ಬಹಳ ಹಿಂದೆ ನಡೆದ ಘಟನೆಯೊಂದನ್ನು ಉಲ್ಲೇಖಿಸಬಯಸುತ್ತೇನೆ. ರಾತ್ರಿ ಬಸ್‌ನಲ್ಲಿ ದೂರದ ಊರಿಗೆ ತೆರಳುತ್ತಿದ್ದ ಸಂದರ್ಭ ಬಸ್‌ನೊಳಗೆ ಯುವಕನೊಬ್ಬ ಹುಡುಗಿಯ ಕೈ ಮೈ ಸವರುತ್ತಿದ್ದ. ಆಕೆ ತನ್ನೊಂದಿಗಿದ್ದ ಮನೆಯವರಲ್ಲಿ ದೂರು ನೀಡಿದಾಗ ಅವರು ಯುವಕನ ಮೇಲೆ ಅವರು ಏರಿಹೋದರು. ಅಷ್ಟು ಹೊತ್ತಿಗೆ ಗಲಾಟೆ ಮಧ್ಯೆ ಪ್ರವೇಶಿಸಿದ ಮಧ್ಯವಯಸ್ಕನೊಬ್ಬ ಯುವಕನ ಮುಖ ಮೂತಿ ನೋಡದೆ ಬಾರಿಸಿದ. ಯುವಕ ಕುನ್ನಿಯ ಹಾಗೆ ಬೊಬ್ಬೆ ಹೊಡೆದರೂ ಬಿಡಲಿಲ್ಲ. ಎಲ್ಲರೂ ಆ ಮಧ್ಯವಯಸ್ಕ ಹುಡುಗಿಯ ಕಡೆಯವ ಎಂದೇ ತಿಳಿದಿದ್ದರು. ಗಲಾಟೆ ಮುಗಿಯಿತು, ಮಧ್ಯವಯಸ್ಕ ಯುವತಿ ಪಕ್ಕದಲ್ಲಿ ನಿಂತ. ಬಸ್ ಸಾಗುತ್ತಿತ್ತು. ಆದರೆ ಒಳಗಡೆ ಮತ್ತ ಕನಲಿಕೆ ಆರಂಭವಾಗಿತ್ತು. ಯುವತಿ ಕೊಸರಾಡುತ್ತಿದ್ದಳು. ಈ ಮಧ್ಯವಯಸ್ಕ ಆ ಯುವಕನಿಗಿಂತ ಒಂದು "ಕೈ’ ಹೆಚ್ಚೇ ಕಿರುಕುಳ ನೀಡುತ್ತಿದ್ದ. ಮನೆಯವರು ಮತ್ತೆ ಹೆಚ್ಚಿಗೆ ತಗಾದೆ ಮಾಡದೆ ಯುವತಿಯನ್ನು ತಮ್ಮ ನಡುವೆಯೇ ಕುಳ್ಳಿರಿಸಿಕೊಂಡರು. ಆಗ ಆಶ್ಚರ್‍ಯವಾಗಿತ್ತು, ಹೀಗೂ ಜನಾ ಇರ್‍ತಾರೆಯೇ ಎಂಬುದು. ಹಾಗಾಗಿ ಪ್ರತಿಭಟನೆ ಮಾಡುವವರೆಲ್ಲಾ ಸಾಚಾ ಇರುವುದಿಲ್ಲ "ನನಗಂತೂ ಸಿಕ್ಕಿಲ್ಲ, ಅವನಿಗೂ ಬೇಡ’ ಅವನಿಗೆ ಸಿಗಬಾರದು, ನನಗೇ ಬೇಕು ಎಂಬ ಅಸೂಯೆಯೂ ಪಾತ್ರ ವಹಿಸುತ್ತದೆ ಎಂದು ತರ್ಕಿಸಬಹುದಾಗಿದೆ. ಇತ್ತೀಚೆಗೆ ಕರಾವಳಿಯಲ್ಲಿ ಹೊರ ಬರುತ್ತಿರುವ ಯುವ ಪ್ರೇಮಿಗಳಿಗೆ ದಿಗ್ಬಂಧನ, poಲೀಸರಿಗೆ ದೂರು, ಜೋಡಿ ಥಳಿತ ಮುಂತಾದ ಪ್ರಕರಣಗಳ ಹಿಂದೆ ಇಂಥಹುದೇ ಅಸೂಯೆ ಮನೆ ಮಾಡಿರುತ್ತದೆ ಎಂದು ಊಹಿಸಬಹುದು. ಇದೆಲ್ಲಾ ಮಾನವ ಸಹಜ ಗುಣಗಳೇ ! ಈಗ ಶಿಲ್ಪಾ ಶೆಟ್ಟಿ ವಿಷಯಕ್ಕೆ ಬರುವ. ಶಿಲ್ಪಾ ಶೆಟ್ಟಿಗೆ ಈಗ ವಿದೇಶದಲ್ಲಿ ಭಾರಿ ಡಿಮಾಂಡ್ ಇದೆ, ಇದೇ ಸಂದರ್ಭದಲ್ಲಿ ವಿದೇಶಕ್ಕೆ ಹೋಗದಂತೆ ಮಾಡಿರುವ ಹಿಂದೆ ಮಸಲತ್ತು ಇರುವುದು ಸಜಹ ಅನಿಸುತ್ತದೆ ಅಲ್ವೆ. ಶಿಲ್ಪಾಗೆ ವಿದೇಶಕ್ಕೆ ತೆರಳದಂತೆ ಕೋರ್ಟ್ ಆದೇಶ ಹೊರಡಿಸಿದೆ. ಗೇರ್‌ಗೆ ಬಂಧನ ವಾರಂಟ್ ! ಪಾಪ ಗೇರ್‌ಗೆ ಏನು ಗೊತ್ತು, ವಿದೇಶದಲ್ಲಿ ಅದು ವೆರಿ ಕಾಮನ್ ! ಇಲ್ಲಿ ಬಂದು ಟಾಪ್‌ಗೇರ್‌ನಿಂದ ಸೀದ ಬ್ರೇಕ್ ಫೈಲ್ ಆದ ಹಾಗೆ ಆಗಿದೆ.

ಕಾಮೆಂಟ್‌ಗಳಿಲ್ಲ: