2007-06-05


ಉಗ್ರ ಹಿಂದುತ್ವ ಬಿಟ್ಟರು, ಮುಸ್ಲಿಮರೂ "ಕೈ’ ಕೊಟ್ಟರು

ಜಿತೇಂದ್ರ ಕುಂದೇಶ್ವರ॥

ಮಂಗಳೂರು: ಮುಖ್ಯಮಂತ್ರಿ, ಉಪಮಖ್ಯಮಂತ್ರಿ, ಸಚಿವರ ಭರpuರ ಆಶ್ವಾಸನೆಯನ್ನು ಬದಿಗೊತ್ತಿದ ಜನ ಕಾಂಗ್ರೆಸ್‌ನ ಯು।ಟಿ।ಖಾದರ್‌ಗೆ ಬೆಂಬಲ ಸೂಚಿಸಿದ್ದಾರೆ। ಅಬೂಬಕ್ಕರ್ ನಾಟೆಕಲ್ ಅವರ ಪರೋಪಕಾರದ ಸಾತ್ವಿಕ ಮನಸ್ಸಿಗಿಂತ ಖಾದರ್‌ನ ಬಿಸಿರಕ್ತದ ಮನಸ್ಸೆ ಉಳ್ಳಾಲ ಮುಸ್ಲಿಮರಿಗೆ ಇಷ್ಟವಾದಂತಿದೆ। ಬಿಜೆಪಿಯ ಯಾವುದೇ ಸಚಿವರ ಆಶ್ವಾಸನೆ, ಕೋಮು ಸೌಹಾರ್ದವನ್ನು ಜನ ನಂಬದ ಕಾರಣ ಚಂದ್ರಶೇಖರ ಉಚ್ಚಿಲ ಅವರು ಸೋಲೊಪ್ಪಿಕೊಳ್ಳಬೇಕಾಯಿತು. ನಮ್ಮ ಸಮುದಾಯದ ಇಬ್ಬರು ಕಣದಲ್ಲಿದ್ದಾರೆ, ಕೋಮುವಿಚ್ಛಿದ್ರಾಕಾರಿ ಶಕ್ತಿಗಳಿಗೆ ಗೆಲುವಾಗದಂತೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ಎಂದು ಮುಸ್ಲಿಮ್ ಸಮುದಾಯದವರು ಶುಕ್ರವಾರ ಪ್ರಾರ್ಥನೆ ಮಾಡುವಾಗ ಸೂಚನೆ ಹೊರಗೆಡಹಿದ್ದರು. ಇದು ಖಾದರ್‌ಗೆ ವರದಾನವಾಯಿತು. ಸಾಂಪ್ರದಾಯಿಕ ವೈರಿಗಳಾದ ಸಲಫಿಗಳು ಈ ಹಿಂದೆ ಸುನ್ನಿ ಸಮುದಾಯಕ್ಕೆ ವಿರೋಧವಾಗಿ ಮತ ಚಲಾಯಿಸುತ್ತಿದ್ದರು ಈ ಬಾರಿ ಬಿಜೆಪಿ ಸೋಲಿಗಾಗಿ ಒಟ್ಟಾಗಿದ್ದಾರೆ. ಸಲಫಿ ಮುಂದಾಳು ಇಸ್ಮಾಯಿಲ್ ಶಾಫಿ ಅವರು ಖಾದರ್‌ನ " ಒಂದಷ್ಟು ಮೌಲ್ಯದ’ ಮನವಿ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದು ಬಿಜೆಪಿ ಸೋಲಿಗೆ ಕಾರಣವಾಗಿದೆ. ಶ್ರೀರಾಮಸೇನೆಯವರು ಮಾತ್ರ ಇಲ್ಲಿ ಹಿಂದುತ್ವಕ್ಕೆ ಬೆಂಬಲ ನೀಡದೆ ಬಿಜೆಪಿ ಸೋಲಿಗೆ ಶ್ರಮಿಸಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದು, ಸಿಪಿಎಂ ಮತಗಳಿಕೆ ಹಿನ್ನಡೆಯಾಗಿರುವುದು ಈ ಎಡಪಂಥೀಯ ಚಿಂತನೆ ಮತಗಳು ಕಾಂಗ್ರೆಸ್‌ಗೆ ಹೊರಳಿರುವುದು ಜಯದ ಅಂತರವನ್ನು ಹೆಚ್ಚಿಸಿತು. ಇನ್ನೊಂದು ಮಖ್ಯ ಕಾರಣ ತ್ರಿಕೋನ ಸ್ಪರ್ಧೆ ನಡೆಯದೆ ಇರುವುದು. ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ಜೆಡಿಎಸ್ ಈ ಬಾರಿ ನಿರ್ಣಾಹಕ ಎಂದೇ ಭಾವಿಸಲಾಗಿತ್ತು. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಉಳ್ಳಾಲದ ಚಿತ್ರಣವನ್ನೇ ಮೂರು ತಿಂಗಳೊಳಗೆ ಬದಲಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹೇಳಿದ್ದರು. ಆದರೆ ಜೆಡಿಎಸ್ ಠೇವಣಿ ಉಳಿಸಿಕೊಂಡರೆ ಎಂಬ ಮಾತು ಹೇಳಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತೋ ಎನೊ. ಠೇವಣಿ ಉಳಿಸಿಕೊಳ್ಳುವುದೇ ಜೆಡಿಎಸ್‌ಗೆ ಮಾಡು ಇಲ್ಲವೆ ಮಡಿ ಹೋರಾಟದಂತಿರುವ ಕಾರಣ ಈ ಮಾತು. ಮುಖ್ಯಮಂತ್ರಿ ಕುಮಾರ ಸ್ವಾಮಿಯ ಚರಿಶ್ಮಾ ಮಾತಿಗಷ್ಟೇ ಸೀಮಿತವಾಗಿದೆ. ಮಾಧ್ಯಮಗಳಲ್ಲಿ ಮಿಂಚಿದ ಅವರು ತಮ್ಮ ಹಿಂದೆ ಬಂದಿದ್ದ ಜನ ಸಮೂಹವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲವಾದರು. ಜೆಡಿಎಸ್ ಹಿಂದೆ ತಿರುಗುತ್ತಿದ್ದ ಜನರೇ ಆ ಪಕ್ಷಕ್ಕೆ ಓಟ್ ಹಾಕಿರುವುದು ಅನುಮಾನ. ಉಗ್ರ ಹಿಂದುತ್ವ, ಮುಸ್ಲಿಮರು ವಿರೋಧವನ್ನು ಪ್ರತಿ ಚುನಾವಣೆಯಲ್ಲಿ ಮೈಗೂಡಿಸಿಕೊಂಡಿದ್ದ ಬಿಜೆಪಿ, ಉಳ್ಳಾಲದಲ್ಲಿ ಮಾತ್ರ ಕೋಮು ಸೌಹಾರ್ದವನ್ನು ಹೇಳಿಕೊಂಡು ತಿರುಗುತ್ತಿತ್ತು. ಏಕೆಂದರೆ ಅಲ್ಲಿ ಮುಸ್ಲಿಮರ ಏರಿಯಾ, ಮುಸ್ಲಿಮರನ್ನು ಓಲೈಸದಿದ್ದರೆ ಮತ ಸಿಗದು, ಉಗ್ರಹಿಂದುತ್ವ ಬೇಡ ಎಂದು ತೀರ್ಮಾನಿಸಿದ್ದರು. ಹಾಗಾಗಿ ನರೇಂದ್ರ ಮೋದಿ, ಸುಶ್ಮಾ ಸ್ವರಾಜ್ ಅಂಥವರು ಪ್ರಚಾರಕ್ಕೆ ಉಳ್ಳಾಲಕ್ಕೆ ಬರುವುದು ಬೇಡ ಎಂದು ತೀರ್ಮಾನಿಸಲಾಗಿತ್ತು. ಆದರೆ ಆದ್ದದೇನು ...ಅತ್ತ ಹಿಂದುತ್ವವೂ ಇಲ್ಲ ಇತ್ತ ಮುಸ್ಲಿಮರ ಓಟೂ ಇಲ್ಲ. ಕೈ ಕೈ ಹಿಸುಕಿಕೊಳ್ಳಬೇಕಾದ, ಇಂಗು ತಿಂದ ಮಂಗನಂತಾದ ಪರಿಸ್ಥಿತಿ.




ಕಾಮೆಂಟ್‌ಗಳಿಲ್ಲ: